The gaze was charmed in Kannada Love Stories by Vaman Acharya books and stories PDF | ಕಣ್ಸನ್ನೆ ಮಾಡಿತು ಮೋಡಿ

Featured Books
  • उजाले की ओर –संस्मरण

    मनुष्य का स्वभाव है कि वह सोचता बहुत है। सोचना गलत नहीं है ल...

  • You Are My Choice - 40

    आकाश श्रेया के बेड के पास एक डेस्क पे बैठा। "यू शुड रेस्ट। ह...

  • True Love

    Hello everyone this is a short story so, please give me rati...

  • मुक्त - भाग 3

    --------मुक्त -----(3)        खुशक हवा का चलना शुरू था... आज...

  • Krick और Nakchadi - 1

    ये एक ऐसी प्रेम कहानी है जो साथ, समर्पण और त्याग की मसाल काय...

Categories
Share

ಕಣ್ಸನ್ನೆ ಮಾಡಿತು ಮೋಡಿ

ಕಣ್ಸನ್ನೇ ಮಾಡಿತು ಮೋಡಿ

(ಆಧುನಿಕ ಯುಗದ ಪ್ರೇಮ ಕಥೆ)

ಲೇಖಕ ವಾಮನಾ ಚಾರ್ಯ


ತಿಂಗಳಿಗೆ ಒಂದು ಲಕ್ಷ ಸಂಬಳ, ವಾಸ ಮಾಡಲು ಭವ್ಯವಾದ ಮನೆ, ಕಾರ್, ಡ್ರೈವರ್, ಹಾಗೂ ಇತರ ಸೌಲಭ್ಯ ಗಳು ಇರುವ ಕೆಲಸ ಕಳೆದುಕೊಂಡು ಪತ್ನಿ ಕೋಮಲ್ ಜೊತೆಗೆ ತೋಟದ ಮನೆ ಚಂದನ ಗಿರಿ ಗ್ರಾಮದಲ್ಲಿ ವಾಸಕ್ಕಾಗಿ ಬಂದ ಗಿರಿರಾಜ್. ಚಂದನ ಗಿರಿ ಗ್ರಾಮದಲ್ಲಿ ಇರುವ ಆತನ ಹತ್ತು ಎಕರೆ ಜಮೀನು ನೋಡು ವವರು ಯಾರೂ ಇಲ್ಲ. ಗಿರಿ ಅದನ್ನು ಅಭಿವೃದ್ಧಿ ಮಾಡುವ ಕನಸು ಕಂಡು ಇಲ್ಲಿಗೆ ಬಂದ. ಸೇವೆ ಮಾಡುವಾಗ ಉಳಿತಾಯ ಮಾಡಿದ ಹಣ ಕೃಷಿಯಲ್ಲಿ ತೊಡಗಿಸಿದ.

ಆರು ಕಿಲೋ ಮೀಟರ್ ದೂರ ಇರುವ ಪಟ್ಟಣ ಸಮೀರ್ ಪೂರ್. ಅಲ್ಲಿಗೆ ಹೋಗಲು ಕಾಂಕ್ರಿಟ್ ರೋಡ್. ಗಂಟೆಗೊಂದು ಬಸ್ ಗಳ ಓಡಾಟ.

ಮಧ್ಯಾಹ್ನ ಎರಡು ಗಂಟೆ ಸಮಯ. ಅದೇ ತಾನೇ ಇಬ್ಬರೂ ಊಟ ಮುಗಿಸಿದ್ದರು. ಕೋಮಲ್ ವಿಶ್ರಾಂತಿ ಎಂದು ನಿದ್ರೆಗೆ ಮೊರೆ ಹೋದಳು. ಹೊರಗೆ ಬಿಸಿಲು ಇದ್ದರೂ ಅಲ್ಹಾದ ಕರ ಗಾಳಿ. ಮನೆ ಮುಂದೆ ಇದ್ದ ಬೇವಿನ ಮರದ ಕೆಳಗೆ ನೆರಳು.ಕಟ್ಟೆ ಮೇಲೆ ಕುಳಿತು ಗಿರಿ, ಐದು ವರ್ಷದ ಹಿಂದೆ ಆದ ತಮ್ಮ ಮದುವೆ ಫೋಟೋ ಆಲ್ಬಮ್ ನೋಡುತ್ತ ಇರುವಾಗ ಪಕ್ಷಿಗಳ ಕಲರವ, ಮಂಗಗಳು ಮರದಿಂದ ಮರಕ್ಕೆ ಜಂಪ್ ಮಾಡುವದು ಮನಸ್ಸಿಗೆ ಮುದ ಕೊಟ್ಟಿತು. ಮದುವೆ ಆಗುವ ಮೊದಲು ಮರೆಯ ಲಾಗದ ಘಟನೆಗಳು ಸ್ಮೃತಿ ಪಟಲದ ಮೇಲೆ ಹಾದು ಹೋದವು.

"ಸಮೀರ್ ಪೂರ್ ಮ್ಯಾನೇಜಮೆಂಟ್ ಕಾಲೇಜ್ ನಿಂದ ಗಿರಿ ಎಂ ಬಿ ಎ ಫಸ್ಟ್ ಕ್ಲಾಸ್ ಪಾಸಾದ ಮೇಲೆ ಚಂದನ್ ಗಿರಿ ಗ್ರಾಮದಿಂದ ಮೂರು ಕಿಲೋಮೀಟರ್ ದೂರ ಇರುವ ಸೋಮೇಶ್ವರ್ ಕೈಗಾರಿಕಾ ಪ್ರದೇಶದ ಲ್ಲಿ ಇಪ್ಪತ್ತು ಎಕರೆ ಜಮೀನಿನಲ್ಲಿ ಇರುವ ಚಕ್ರಪಾಣಿ ಫುಡ್ ಪ್ರೊಸೆಸಿಂಗ್ ಕಂಪನಿಯಲ್ಲಿ ಸೇಲ್ಸ್ ಆಫೀಸರ್ ಎಂದು ಕೆಲಸಕ್ಕೆ ಸೇರಿದ. ಮೊದಲನೇ ವರ್ಷ ಕರ್ತವ್ಯ ನಿಭಾಯಿಸುವದ ರಲ್ಲಿ ವಿಫಲನಾಗಿ ಕೆಲಸ ಹೋಗುವ ದಾರುಣ ಪರಿಸ್ಥಿತಿ ಒದಗಿ ಬಂದಾಗ ಒಬ್ಬ ಪುಣ್ಯಾತ್ಮರು ಆಪದ್ ಬಾಂಧವ ರಾಗಿ ಬಂದು ಅವನಿಗೆ ಉಪಕಾರ ಮಾಡಿ ಕೆಲಸ ಉಳಿಯುವಂತೆ ಮಾಡಿದರು. ಮುಂದೆ ಒಂದು ವರ್ಷ ಆದಮೇಲೆ ಅವನಿಗೆ ಕೆಲಸದ ಮೇಲೆ ಸರಿಯಾದ ಹಿಡಿತ ಬಂದು ಎಲ್ಲವೂ ಸುಗಮ ವಾಯಿತು.

ಆ ಸಮಯದಲ್ಲಿ ಗಿರಿ ಮಾಡಿದ ಪರಿಶ್ರಮದಿಂದ ಎರಡು ವರ್ಷದಲ್ಲಿ ಕಂಪನಿ ವ್ಯವಹಾರ ದ್ವಿಗುಣ ವಾಗಿ ಒಳ್ಳೆಯ ಹೆಸರು ಗಳಿಸಿದ. ಪ್ರಗತಿ ಹಾಗೆ ಮುಂದು ವರೆದು ಸತತವಾಗಿ ನಿಗದಿತ ಗುರಿ ಗಿಂತ ಹೆಚ್ಚು ವ್ಯವಹಾರ ಬೆಳೆಯಿತು . ಐದು ವರ್ಷದ ನಂತರ ಗಿರಿ ಮಾಡಿದ ಅವಿರತ ಪರಿಶ್ರಮ ಹಾಗು ಅದ್ಭುತ ಕಾರ್ಯ ಕೌಶಲ್ಯದಿಂದ ಕಂಪನಿ ಇಡೀ ದೇಶದಲ್ಲಿ ಪ್ರಖ್ಯಾತಿ ಗಳಿಸಿ, ಆತನನ್ನು ಕಂಪನಿ ಜನರಲ್ ಮ್ಯಾನೇಜರ್ ಮಾಡಿದರು.

ಒಂದು ದಿವಸ ಭಾನುವಾರ ಮಧ್ಯಾಹ್ನ ಒಂದು ಗಂಟೆಗೆ ಅವನ ಮೊಬೈಲ್ ರಿಂಗ್ ಆಯಿತು. ಕರೆ ಯಾರದು ಎಂದು ನೋಡಿದ. ಅವರು ಬೇರೆ ಯಾರೂ ಆಗಿರದೆ ಕಷ್ಟದಲ್ಲಿ ಸಹಾಯ ಮಾಡಿದ ಆಪದ್ಭಾ0ಧವ.

"ಹಲೋ ಗಿರಿ, ನೀನು ಓದಿದ ಕಾಲೇಜ್ ಪ್ರಾಂಶುಪಾಲ ಮದನ್ ಗೋಪಾಲ,"

"ಗುಡ್ ಆಫ್ಟರ ನೂನ್ ಸರ್."

"ಕ0ಗ್ರಾಚುಲೇಶನ್ಸ್ ಗಿರಿ. ನೀನು ಕೆಲಸ ಮಾಡುವ ಕಂಪನಿಯನ್ನು ಉತ್ತುಂಗಕ್ಕೆ ತಲುಪಿಸಿ ರುವದು, ನಿನಗೆ ಪ್ರಮೋ ಷನ್ ಆಗಿರುವದು ನಿಜವಾಗಿಯೂ ಮೆಚ್ಚುವಂತ ಹದು. ಐ ಯಾಮ್ ಪ್ರೌಡ ಆಫ್ ಯು. ನೀನು ನನ್ನ ವಿದ್ಯಾರ್ಥಿ. ನಿನಗೆ ಸನ್ಮಾನ ಮಾಡುವ ಕಾರ್ಯಕ್ರಮ ನಮ್ಮ ಕಾಲೇಜ್ ಸಮಿತಿ ನಿರ್ಧಾರ ಮಾಡಿರುವರು. ಬರುವ ಏಪ್ರಿಲ್ ದಿನಾಂಕ ಹನ್ನೊಂದು ಭಾನುವಾರ ಸಾಯಂಕಾಲ ಐದು ಗಂಟೆಗೆ ಆಗಬಹುದಾ? ನೀನು ಆ ಸಮಾರಂಭದಲ್ಲಿ ಮುಖ್ಯ ಅತಿಥಿ ಆಗುವ ಜೊತೆಗೆ ಅಂತಿಮ ಎಂ ಬಿ ಎ ಡಿಗ್ರಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಗಳಿಗೆ ಉತ್ತರ ಕೊಟ್ಟು ಮಾರ್ಗದರ್ಶನ ಮಾಡಬೇಕು.”

ಗಿರಿ ಗೆ ಖುಷಿ ಆಗಿ,

"ಥ್ಯಾಂಕ್ಯೂ ಯು ಸರ್. ಖಂಡಿತವಾಗಿ ಬರುತ್ತೇನೆ," ಎಂದು ಹೇಳಿಯೇ ಬಿಟ್ಟ. ಆತನ

ಆಪ್ತ ಕಾರ್ಯದರ್ಶಿ ಕೂಡಾ ಅಂದು ಯಾವ ಕ್ಲಾಯಿಂಟ್ ಬರುವದಿಲ್ಲ ಎಂದಳು. ಗಿರಿ ಗೆ ಕಾಲೇಜಿನ ಸಮಾರಂಭಕ್ಕೆ ಹೋಗಲು ಯಾವ ಅಡೆ ತಡೆ ಆಗಲಿಲ್ಲ.

ನಿಗದಿತ ದಿವಸ ಕಾಲೇಜ್ ಗೆ ತನ್ನ ಬಿಳಿ ಬಣ್ಣದ ಬ್ರಾಂಡ್ ನಿವ್ ಕಾರ್ ಡ್ರೈವ್ ಮಾಡಿಕೊಂಡು ಸರಿಯಾದ ಸಮಯಕ್ಕೆ ಆಗಮಿಸಿದ. ನೀಲಿ ಬಣ್ಣದ ಸೂಟ್ ಹಾಕಿದ ಆತ ಕಾರ್ ಇಳಿದ ಕೂಡಲೇ ಕಾಲೇಜ್ ಗೇಟ್ ಮುಂದೆ ಕೆಲವು ವಿದ್ಯಾರ್ಥಿಗಳು ಗಿರಿರಾಜ್ ಅವರನ್ನು ಸ್ವಾಗತಿಸಿ ಅತಿಥಿ ಕೋಣೆ ಯಲ್ಲಿ ಕೂಡಿಸಿ ಕಾಫಿ ಕೊಟ್ಟರು. ಸ್ವಲ್ಪ ಸಮಯದ ನಂತರ ಒಬ್ಬ ವಿದ್ಯಾರ್ಥಿ ಬಂದು ಸಭಾಂಗಣದಲ್ಲಿ ಕರೆದುಕೊಂಡು ಹೋಗಿ ಪ್ರೇಕ್ಷಕರ ಮುಂದಿನ ಸಾಲಿನಲ್ಲಿ ಪ್ರಾಂಶುಪಾಲರು ಮದನ್ ಗೋಪಾಲ ಅವರ ಪಕ್ಕ ದಲ್ಲಿ ಕೂಡಿಸಿದ. ಆಗ ಗಿರಿ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿ ಆಸನದ ಮೇಲೆ ಕುಳಿತ.

ಆಗಲೇ ವೇದಿಕೆ ಮೇಲೆ ಸುಮಾರು ಇಪ್ಪತ್ತೈದು ವರ್ಷದ ತೆಳ್ಳಗೆ ಬೆಳ್ಳಗೆ ಇದ್ದು ಉದ್ದನೆ ಕಪ್ಪು ಬಣ್ಣದ ಕೂದಲು, ಹಣೆಗೆ ಚಿಕ್ಕ ಕುಂಕುಮ, ಕೊರಳಲ್ಲಿ ಒಂದು ಎಳೆಯ ಚಿನ್ನದ ನೆಕ್ಲೆಸ್, ಗುಲಾಬಿ ಬಣ್ಣದ ರೇಷ್ಮೆ ಸೀರೆ, ದೇಸಿ ಪಾದರಕ್ಷೆ ಹಾಗೂ ಬಣ್ಣದ ಕನ್ನಡಕ ಧರಿಸಿದ ಸುಂದರ ಯುವತಿ ಇದ್ದಳು. ಆಕೆ ಅಂದಿನ ಕಾರ್ಯಕ್ರಮದ ನಿರೂಪಕಿ. ಆಕೆಯನ್ನು ನೋಡಿದ ಗಿರಿ ಮಾತನಾಡದೆ ಸ್ತಬ್ದ ನಾದ. ಆಕೆಯ ಚಲುವಿಕೆಗೆ ಅವನು ಮರುಳಾದ. ಆ ಸುಂದರಿ ತನ್ನ ಬಾಳ ಸಂಗಾತಿ ಆದರೆ ಹೇಗೆ ಎಂದು ಮನಸ್ಸಿನಲ್ಲಿ ಅಂದು ಕೊಂಡ. ವೇದಿಕೆ ಮೇಲೆ ಬಂದು ಅಧ್ಯಕ್ಷ ಸ್ಥಾನ ಅಲಂಕರಿಸಲು ಮದನ್ ಗೋಪಾಲ್ ಅವರನ್ನು ಹಾಗೂ ಗಿರಿರಾಜ್ ನಿಗೆ ಮುಖ್ಯ ಅತಿಥಿ ಸ್ಥಾನ ಅಲಂಕರಿಸಲು ವಿನಂತಿ ಮಾಡಿದಳು. ಅದರಂತೆ ಇಬ್ಬರೂ ವೇದಿಕೆ ಮೇಲೆ ಹೋಗಿ ಆಸನದ ಮೇಲೆ ಕುಳಿತರು. ಆಗ ವಿದ್ಯಾರ್ಥಿಗಳ ಜೋರಾದ ಕರ ತಾಡನೆ. ಗಿರಿ ಅವರಿಗೆ ಹಾರ ಹಾಕಿ ಸ್ವಾಗತಿಸಿದ ಒಬ್ಬ ವಿದ್ಯಾರ್ಥಿ. ಮದನ್ ಗೋಪಾಲ್ ಅವರಿಗೆ ಹಾರ ಹಾಕಿದ ಇನ್ನೊಬ್ಬ ವಿದ್ಯಾರ್ಥಿ. ದೀಪ ಬೆಳಗಿದ ಕೂಡಲೇ ಆರು ವರ್ಷದ ಪುಟ್ಟ ಹುಡುಗಿ ವಂದನಾ ದೇವರ ನಾಮ ಹಾಡಿದಳು. ಗಿರಿರಾಜ್ ಅವರಿಗೆ ಮಾತನಾಡಲು ನಿರೂಪಕಿ ಹೇಳಿದಳು.

ಗಿರಿ ಅವರು ತಮ್ಮದೇ ಆದ ಸ್ಟೈಲ್ ನಲ್ಲಿ ಮೈಕ್ ಹತ್ತಿರ ಬಂದರು. ಎಂ ಬಿ ಎ ಆದಮೇಲೆ ಕಂಪನಿ ಸೇರಿ ಇಲ್ಲಿಯವರೆಗೆ ಆದ ಘಟನೆಗ ಳನ್ನು ನಿರರ್ಗಳವಾಗಿ ಐದು ನಿಮಿಷ ಮಾತ ನಾಡಿದರು. ವಿದ್ಯಾರ್ಥಿ ಗಳು ಮೇಲಿಂದ ಮೇಲೆ ಕರತಾಡನ ಮಾಡಿದರು. ಎಂ ಬಿ ಎ ಕೊನೆಯ ವರ್ಷದ ವಿದ್ಯಾರ್ಥಿ ಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಟ್ಟರು. ಆ ಸಮಯದಲ್ಲಿ ನಿರೂಪಕಿಯ ನೋಟ ಗಿರಿ ಅವರ ಮೇಲೆ ಇದ್ದು ಕಣ್ಸನ್ನೆ ಯಿಂದ ಪ್ರೀತಿ ವ್ಯಕ್ತ ಪಡಿಸಿದಳು. ಆಕೆಯ ಮೋಹಕ ನೋಟದಿಂದ ಗಿರಿ ಅವಳ ಪ್ರೇಮ ಪಾಶದಲ್ಲಿ ಬಿದ್ದ. ಇಬ್ಬರೂ ಪರಸ್ಪರ ತಮ್ಮ ಇಂಗಿತ ಅರಿತರು. ನಂತರ ಪ್ರಾಂಶು ಪಾಲರು ಮಾತಾಡಿದ ಮೇಲೆ ವಂದನಾರ್ಪಣೆ ಯೊಂದಿಗೆ ಸಭೆ ಮುಕ್ತಾಯ ವಾಯಿತು. ಕಾರ್ಯಕ್ರಮ ಮುಗಿದು ಎಲ್ಲರೂ ನಿರ್ಗಮಿಸಬೇಕು ಎನ್ನುವಾಗ ಅನಿರೀಕ್ಷಿತವಾಗಿ ಸುಂಟರ ಗಾಳಿ ಬಂದು ವೇದಿಕೆ ಆಲುಗಾಡಿ ಅಲ್ಲಿ ಇದ್ದವರು ಗಾಬರಿ ಆದರು. ಕಾರ್ಯಕ್ರಮಕ್ಕೆ ಬಂದ ವಿದ್ಯಾರ್ಥಿಗ ಳು ಓಡುವಾಗ ಸಣ್ಣ ಪುಟ್ಟ ಗಾಯಗಳು ಆದವು. ಗಿರಿ ತನ್ನ ಸಮಯ ಪ್ರಜ್ಞೆ ಯಿಂದ ನಿರೂಪಕಿಯನ್ನು ಸುರಕ್ಷಿತವಾಗಿ ಅಲ್ಲಿಯೇ ಇದ್ದ ಕಾಲೇಜ್ ಹಾಸ್ಟೆಲ್ ಒಳಗೆ ಕರೆದುಕೊಂಡು ಹೋದ. ಅಲ್ಲಿ ಯಾರೂ ಇಲ್ಲ. ನಿರೂಪಕಿಗೆ ಗಾಬರಿ ಆಗ ಬೇಡ ಎಂದು ಧೈರ್ಯ ಹೇಳಿದ. ಆಕೆ ಯಾರೂ ಎಂದು ತಿಳಿದ ಗಿರಿಗೆ ಆಶ್ಚರ್ಯ. ನಿರೂಪಕಿ ಬೇರೆ ಆಗಿರದೆ ಪ್ರಾಂಶುಪಾಲರು ಮದನ್ ಗೋಪಾಲ ಅವರ ಮಗಳು ಕೋಮಲ. ಬೆಂಗಳೂರು ನಲ್ಲಿ ಬಿ ಇ ಕಂಪ್ಯೂಟರ್ ಸಾಯನ್ಸ್ ಮಾಡಿ ಎಂ ಎಸ್ ಓದಲು ಲಾಸ್ ಎಂಜಿಲೀಸ್, ಅಮೇರಿಕ ಹೋಗುವ ಸಿದ್ಧತೆ ಆಗಿತ್ತು. ಒಂದು ವಾರ ಬಿಟ್ಟು ಆಕೆ ಹೋಗುವ ಫ್ಲೈಟ್ ನಲ್ಲಿ ಆಗಲೇ ಸೀಟ್ ಕಕಾಯ್ದಿರಿಸಿದ್ದರು. ಮೊದಲ ನೋಟದಲ್ಲಿ ಗಿರಿಮೇಲೆ ಮನಸೋತು ಪ್ರೀತಿ ಮಾಡಿ ಅಮೇರಿಕಾ ಹೋಗುವದನ್ನು ಕ್ಯಾನ್ಸಲ್ ಮಾಡಿದಳು.

ಮದನ್ ಗೋಪಾಲ್ ಅವರನ್ನು ಸೆಕ್ಯೂರಿಟಿ ಸುರಕ್ಷಿತವಾಗಿ ಅವರ ಮನೆಗೆ ಬಿಟ್ಟು ಬಂದ. ಮನೆಯಲ್ಲಿ ಗಿರಿ ಹಾಗೂ ಕೋಮಲ್ ಚಕ್ಕಂದ ಮಾಡುವದನ್ನು ನೋಡಿ ಅವರಿಗೆ ಕೋಪ ಬಂದಿತು.

"ಇದೇನು ಕೋಮಲ್, ಗಿರಿ ಜೊತೆಗೆ ನಿನ್ನ ಚಕ್ಕಂದ?"

"ಅಪ್ಪಾಜಿ, ನಾನು ಗಿರಿಯನ್ನು ಪ್ರೀತಿ ಮಾಡುತ್ತೇನೆ. ನಿಮ್ಮ ಆಶೀರ್ವಾದ ಬೇಕು," ಎಂದಳು.

ಆಗ ಮದನ್ ಗೋಪಾಲ್ ಅವರಿಗೆ ಕೋಪ ಬಂದರೂ ತಡೆದುಕೊಂಡರು. ಸ0ದಿಗ್ಧ ದಲ್ಲಿ ಸಿಕ್ಕಿ ಹಾಕಿಕೊಂಡರು. ಒಂದು ಕಡೆ ಗಿರಿ ಅಚ್ಚು ಮೆಚ್ಚಿನ ವಿದ್ಯಾರ್ಥಿ. ಇನ್ನೊಂದು ಕಡೆ ಕೆಲಸ ಮಾಡುತ್ತಿರುವ ಸಂಸ್ಥೆಯ ಮುಖ್ಯಸ್ಥನ ಏಕೈಕ ಪುತ್ರ ಆಗುವ ಭಾವಿ ಅಳಿಯ. ತಾಯಿ ಇಲ್ಲದ ಮಗಳು ಎಂದು ಕೋಮಲ್ ಮೇಲೆ ವಿಶೇಷ ಪ್ರೀತಿ. ಚಕ್ರಪಾಣಿ ಅಳಿಯ ನಾದರೆ ಕೋಮಲ್ ಗೆ ಉಜ್ವಲ ಭವಿಷ್ಯ ಆಗುವದು ಎನ್ನುವ ಇಚ್ಛೆ.

“ಕೋಮಲ್, ನೀನು ಮುಂದಿನ ವಾರ ಅಮೇರಿಕ ಎಮ್ ಎಸ್ ಮಾಡಲು ಹೋಗಬೇಕು. ನಮ್ಮ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷರ ಮಗ ಚಕ್ರಪಾಣಿ ಜೊತೆಗೆ ನಿನ್ನ ಮದುವೆ ಮಾಡುವ ನಿಶ್ಚಯ ಮಾಡಿದ್ದೇನೆ.”

“ಅಪ್ಪಾಜಿ, ನನಗೆ ಎಲ್ಲವೂ ಗೊತ್ತು. ಪ್ರಸ್ತುತ ನಾನು ಪ್ರಜ್ಞಾವಂತ ಮಹಿಳೆ. ಜೀವನದ ಲ್ಲಿ ಒಮ್ಮೆ ತೆಗೆದುಕೊಳ್ಳುವ ಮಹತ್ವದ ನಿರ್ಧಾರವನ್ನು ನನ್ನ ಮೇಲೆ ಬಿಡಿ. ನನಗೆ ಚಕ್ರಪಾಣಿ ಬೇಡ ಹಾಗೂ ಅಮೇರಿಕ ಬೇಡ,” ಎಂದಳು.

ಆಗ ಮದನ್ ಗೋಪಾಲ ಮಗಳ ಇಚ್ಛೆ ತಮ್ಮ ಇಚ್ಛೆ ಎಂದು ಸಮ್ಮತಿ ಕೊಟ್ಟರು. ಗಿರಿ ಹಾಗೂ ಕೋಮಲ್ ಅವರಿಗೆ ಎಲ್ಲಿಲ್ಲದ ಉತ್ಸಾಹ.

****

"ಗಿರಿ ಇಲ್ಲಿ ಬರ್ತೀರಾ" ಎಂದು ಕೋಮಲ್ ಕರೆದಳು. ತನ್ನ ಹಳೆ ನೆನಪುಗಳಿಂದ ಹೊರ ಬಂದು ಒಳಗೆ ಹೋದ.

"ಏನ್ರಿ, ಎಷ್ಟು ಸಲ ಕರೆಯಬೇಕು. ಯಾವ ಲೋಕದಲ್ಲಿ ವಿಹಾರ ಮಾಡುತ್ತಿದ್ದೀರಿ?"

"ಅದೇ, ಅಂದು ನಿನ್ನ ಮೋಹಕ ಕಣ್ಸನ್ನೇ ಮೋಡಿ ನಮ್ಮಿಬ್ಬರ ಜೋಡಿ ಆಗುವಂತೆ ಮಾಡಿತು. ನೆನಪುಗಳ ಲೋಕದಲ್ಲಿ ವಿಹಾರ ಮಾಡುವಾಗ ನಿನ್ನ ಕರೆಯಿಂದ ಅದು ನಿಂತು ಹೋಯಿತು."

"ಹೋಗ್ಲಿ ಬಿಡ್ರಿ,” ಎಂದು ನಾಚಿಕೆಯಿಂದ ಒಳಗೆ ಹೋದಳು.

ಆವಳನ್ನು ಹಿಂಬಾಲಿಸಿದ.

“ಕೋಮಲ್, ನಾಚಿಕೆ ಏಕೆ?”

“ಗಿರಿ,ನಿಜವಾಗಿಯೂ ನಾನು ಅಷ್ಟು ಚಲುವೆನಾ?”

"ಹೌದು, ನಿಸ್ಸಂಶಯ ವಾಗಿ ನೀನು ಚಲುವೆ. ರಂಭೆ, ಊರ್ವಶಿ, ಮೇನಕಾ ನಿನ್ನ ಮುಂದೆ ಅವರೆಲ್ಲ ಏನೂ ಅಲ್ಲ.”

"ಚಕ್ರಪಾಣಿ ನೋಡಲು ಗುಡ್ ಪರ್ಸ ನ್ಯಾಲಿಟಿ ಹಾಗೂ ಶ್ರೀಮಂತ. ಏಕೆ ಅವನನ್ನು ತಿರಸ್ಕಾರ ಮಾಡಿದೆ?"

"ನನಗೆ ಬೇಕಾಗಿದ್ದು ಹಣ ದಿಂದ ಶ್ರೀಮಂತ ಅಲ್ಲ, ಗುಣದಿಂದ ಶ್ರೀಮಂತ. ಅದು ನಿನ್ನಲ್ಲಿ ಕಂಡೆ.”

"ನೋಡು, ನಿನ್ನನ್ನು ಮದುವೆ ಆಗಿ ನಾನು ಕಂಪನಿಯ ಪ್ರತಿಷ್ಠೆಯ ನೌಕರಿ ಕಳೆದು ಕೊಂಡೆ. ನಿನ್ನ ಅಪ್ಪ ನಿಗೆ ಅವಧಿ ಪೂರ್ವ ನಿವೃತ್ತಿ ಮಾಡಿದರು. ಪ್ರಸ್ತುತ ನಿನಗೆ ಗ್ರಾಮದಲ್ಲಿ ವಾಸ ಮಾಡುವ ಅನಿರೀಕ್ಷಿತ ಪರಿಸ್ಥಿತಿ ಒದಗಿ ಬಂದಿತು."

"ಗಿರಿ ಇದೆಲ್ಲವೂ ಗೊತ್ತಿದ್ದರೂ ನಾನು ನಿನ್ನ ಕೈ ಹಿಡಿದೆ. ಯಾಕೆ ಹೇಳು?"

"ನಮ್ಮದು ಅಮರ, ಮಧುರ, ಪ್ರೇಮ.”

"ಹೌದು! ಕಣ್ಸನ್ನೆ ಭಾಷೆಯಲ್ಲಿ ನಾವಿಬ್ಬರೂ ಪರಿಣಿತರು ಇರುವದರಿಂದ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡೆವು.”

ಇಬ್ಬರೂ ಬಿದ್ದು ಬಿದ್ದು ನಗುವಾಗ ಹೊರಗಡೆ ಅಮ್ಮಾವ್ರೇ ಎನ್ನುವ ಧ್ವನಿ ಕೇಳಿಸಿತು.

ಕೋಮಲ್ ಹೊರಗೆ ಬಂದು ಕೆಲಸ ಮಾಡುವ ನಿಂಗಮ್ಮನಿಗೆ ಒಳಗೆ ಬರಲು ಹೇಳಿದಳು.