Annihilation is an extreme mind in Kannada Short Stories by Vaman Acharya books and stories PDF | ವಿನಾಶ ಕಾಲೇ ವಿಪರೀತ ಬುದ್ದಿ

Featured Books
  • उजाले की ओर –संस्मरण

    मनुष्य का स्वभाव है कि वह सोचता बहुत है। सोचना गलत नहीं है ल...

  • You Are My Choice - 40

    आकाश श्रेया के बेड के पास एक डेस्क पे बैठा। "यू शुड रेस्ट। ह...

  • True Love

    Hello everyone this is a short story so, please give me rati...

  • मुक्त - भाग 3

    --------मुक्त -----(3)        खुशक हवा का चलना शुरू था... आज...

  • Krick और Nakchadi - 1

    ये एक ऐसी प्रेम कहानी है जो साथ, समर्पण और त्याग की मसाल काय...

Categories
Share

ವಿನಾಶ ಕಾಲೇ ವಿಪರೀತ ಬುದ್ದಿ

ವಿನಾಶ ಕಾಲೇ ವಿಪರೀತ ಬುದ್ಧಿ

(ಪಾಪಕ್ಕೆ ಪ್ರಾಯಶ್ಚಿತ್ತ ಇದೇ ಜನ್ಮದಲ್ಲಿ-ಕಥೆ)

ಲೇಖಕ- ವಾಮನಾ ಚಾರ್ಯ


ಬೆಂಗಳೂರು ಕಡೆಗೆ ಹೋಗುವ ರೈಲು ರಾಘವಪುರ ನಿಲ್ದಾಣಕ್ಕೆ ಆಗಮಿಸಿದಾಗ ಸಾಯಂಕಾಲ ಏಳು ಗಂಟೆ. ವಿದ್ಯುತ್ಕ್ಷಕ್ತಿ ಸರಬರಾಜು ಮೂರು ಸೆಕೆಂಡ್ ಸ್ಥಗಿತ ವಾಗಿ ಪ್ರಯಾಣಿಕರು ಪರದಾಟದಲ್ಲಿಯೇ ಬೋಗಿ ಹತ್ತಲು ಎಲ್ಲಿಲ್ಲದ ಶಕ್ತಿ ಪ್ರದರ್ಶನ ಮಾಡಬೇಕಾಯಿತು. ಇದರಿಂದ ರೈಲು ನಿರ್ಗಮನ ವಾಗಲು ಸ್ವಲ್ಪ ಸಮಯ ವಿಳಂಬ ವಾಯಿತು.

ಪ್ರವೀಣ್ ಸೋಮಪುರ್, ಅವರ ಪತ್ನಿ ಪ್ರತಿಮಾ ಹಾಗೂ ಹದಿನೈದು ವರ್ಷದ ಮಗ ಸುಪ್ರೀತ್ ರಿಜರ್ವ್ ಬರ್ತ್ ಸಂಖ್ಯೆ ಎಸ್ 35, 36, ಮತ್ತು 37 ರಲ್ಲಿ ಆಸೀನರಾದರು. ಸೋಮಪುರ್ ಕುಟುಂಬ ಎರಡು ದಿವಸ ಗಳ ಹಿಂದೆ ರಾಘವ್ ಪುರ ಕ್ಕೆ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದರು. ಹದಿನೈದು ವರ್ಷದ ಹಿಂದೆ ಅವರಿಬ್ಬರು ರಾಘವಪುರ್ ದಲ್ಲಿ ಶಿಕ್ಷಕರು ಎಂದು ಕೆಲಸ ಮಾಡು ವಾಗ ಸುಪ್ರೀತ್ ನ ಜನನ ವಾಯಿತು.

ರೈಲು ಬಿಡುವಾಗ ಅವಸರದಲ್ಲಿ ಒಬ್ಬ ವಯಸ್ಸಾದ ಮಹಿಳೆ ಬಂದು ಬರ್ತ ಸಂಖ್ಯೆ 35 ತನ್ನದು ಎಂದು ಪ್ರವೀಣ್ ಜೊತೆಗೆ ಮಾತನಾಡುವಾಗ ಆಕೆಗೆ ಅವರು ಯಾರು ಎಂದು ತಿಳಿದು ಗಾಬರಿ ಆದಳು. ಆದರೆ ಅವರಿಗೆ ಇವಳು ಯಾರು ಎಂದು ಆ ಕ್ಷಣದಲ್ಲಿ ಗೊತ್ತಾಗಲಿಲ್ಲ. ರೈಲು ಅಧಿಕಾರಿ ಬಂದು ಆಕೆಗೆ ಬೋಗಿ ಎಸ್ 9 ಬರ್ತ 35 ಕ್ಕೆ ಹೋಗಿ ಎಂದರು. ಅಲ್ಲಿಗೆ ಹೋಗಿ ತಾನು ಕಾಯ್ದಿರಿಸಿದ ಸ್ಥಳದಲ್ಲಿ ಕುಳಿತ ಮೇಲೆ ಆಕೆಗೆ ವಿಪರೀತ ಗಾಬರಿಯಿಂದ ಮೈಯೆಲ್ಲಾ ಬೆವರು ಆಗಿ ಹದಿನೈದು ವರ್ಷಗಳ ಹಿಂದೆ ಆದ ಘಟನೆಗಳು ಆಕೆಯ ಸ್ಮೃತಿ ಪಟಲದ ಮೇಲೆ ಬ0ದಿತು.

ಆ ಸಮಯದಲ್ಲಿ ದಾಮಿನಿ ರಾಘವಪುರ್ ದ ಡಾ. ನಿಶಿಕಾಂತ್ ಅವರ ಅಶ್ವಿನಿ ಆಸ್ಪತ್ರೆಯಲ್ಲಿ ನರ್ಸ್ ಎಂದು ಕೆಲಸ ಮಾಡುತ್ತಿದ್ದಳು. ಆಕೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹತ್ತು ವರ್ಷ ಹೆರಿಗೆ ಕೆಲಸ ಮಾಡಿದ ಅನುಭವ. ರೋಗಿಗಳು ವಿಶೇಷವಾಗಿ ಹೆಣ್ಣುಮಕ್ಕಳು ಇದ್ದರೆ ಆಕೆ ತುಂಬಾ ವಿನಯದಿಂದ ಮಾತನಾಡಿಸುವಳು.

ಒಂದು ದಿವಸ ಡಾ. ನಿಶಿಕಾಂತ್ ನರ್ಸ್ ದಾಮಿನಿ ಇರುವಲ್ಲಿ ಬಂದು,

"ದಾಮಿನಿ ಅವರೇ, ನಿಮಗೆ ಒಂದು ಮಹತ್ವದ ವಿಷಯ ಹೇಳಬೇಕು. ಅದನ್ನು ಹೇಗೆ ಪ್ರಾರಂಭ ಮಾಡಲಿ ಎನ್ನು ವದು ಗೊತ್ತಾಗುತ್ತ ಇಲ್ಲ."

"ಸರ್, ವಿಷಯ ಏನು ಹೇಳುವಿರಿ ಎನ್ನುವದು ನನಗೆ ಅರ್ಥ ವಾಯಿತು. ನೀವು ನನಗೆ ಹೊಸ ಜವಾಬ್ದಾರಿ ಕೊಡುವದು ತಾನೇ?"

"ಅದಾವುದು ಅಲ್ಲ. ನನ್ನ ಮದುವೆ ಆದ ಮೂರನೇ ವರ್ಷ ಪತ್ನಿ ವಸುಮತಿ

ಇಹ ಲೋಕ ತ್ಯೆಜಿಸಿದಳು. ಈಗ ಬಾಳ ಸಂಗಾತಿ ಅವಶ್ಯಕತೆ ಇದೇ. ಅದನ್ನು ನೀನು ಪೂರೈಸ ಬೇಕು. ನನಗೆ ನಿಮ್ಮ ಮೇಲೆ ಪ್ರೇಮ ಅಂಕುರವಾಗಿದೆ. ನೀವು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನನಗೆ ಇದೆ",ಎಂದ.

ಆ ಸಮಯದಲ್ಲಿ ದಾಮಿನಿ ಗೆ ಆಶ್ಚರ್ಯ ವಾಗಿ ಮಾತು ಬರದೇ ಮೂಕಳಾದಳು.

ಡಾ. ನಿಶಿಕಾಂತ್ ಅವರೇ, ನಾನು ವಿಧವೆ. ನನ್ನ ಮದುವೆ ಆಗಿ ಎರಡು ವರ್ಷ ಆದಮೇಲೆ ಪತಿ ಚರಣ್ ರಾಜ್ ಅವರು ದೆಹಲಿಗೆ ಕೆಲಸಕ್ಕೆ ಹೋದವರು ಮರಳಿ ಬರಲೇ ಇಲ್ಲ. ಕಾರಣ ದೆಹಲಿ ಸಮೀಪ ಭೀಕರ ರೈಲು ದುರಂತದಲ್ಲಿ ಅವರು ಮರಣ ಹೊಂದಿದರು. ಸಧ್ಯ ನಾನು ಏಕಾಂಗಿ,” ಎಂದಳು.

“ದಾಮಿನಿ ಅವರೇ, ನಾನು ವಿದುರ, ನೀವು ವಿಧವೆ. ಇಬ್ಬರ ದಾರಿ ಸುಗಮ.”

“ಸರ್, ಒಂದು ಸಮಸ್ಯ.”

“ಅದೇನು ಬೇಗ ಹೇಳಿ.”

“ನೀವು ಎಮ್ ಬಿ ಬಿ ಎಸ್, ಎಮ್ ಡಿ. ನಾನು ನರ್ಸಿಂಗ್ ಡಿಪ್ಲೋಮ ಪಾಸ್.”

“ನಮ್ಮ ಮನಸ್ಸು ಒಂದಾದಮೇಲೆ ಅವೆಲ್ಲ ಲೆಕ್ಕಕ್ಕೆ ಬರುವದಿಲ್ಲ.”

ಈ ಸಂಭಾಷಣೆ ನಡೆದಾಗ ಆಸ್ಪತ್ರೆಯಲ್ಲಿ ಇಬ್ಬರೇ. ಒಪ್ಪಿಗೆ ಸೂಚಕ ವಾಗಿ ಇಬ್ಬರು ಕೈ ಮಿಲಾಯಿಸಿದರು. ನಿಶಿಕಾಂತ್ ಒಂದು ಹೆಜ್ಜೆ ಮುಂದೆ ಹೋಗಿ ಪ್ರೀತಿಯ ಅಪ್ಪುಗೆ ಮಾಡಿದ. ಮರುದಿವಸದಿಂದ ಇಬ್ಬರ ವಾಸ ಒಂದೇ ಮನೆಯಲ್ಲಿ.

ಆಸ್ಪತ್ರೆ ಸ್ಟಾಫ್ ಮಧ್ಯ ‘ಆಜ್ ಕೀ ತಾಜಾ ಖಬರ್’ ಶುರು ಆಯಿತು. ಇವರಿಬ್ಬರ ಮದುವೆ ಆಗಿದೆಯಾ ಅಥವಾ ಲಿವ್ ಇನ್ ರಿಲೇಷನ್ ಎಂಬ ಕುತೂಹಲ. ಇವರ ಅನುಮಾನ ಹಾಗೆ ಉಳಿಯಿತು.

ಅವರಿಬ್ಬರು ಇಂತಹ ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಅಪಸ್ವರಗಳು ಬರುವದು ಸಹಜ. ಅವುಗಳನ್ನು ನಿರ್ಲಕ್ಷ ಮಾಡಿದರು.

ದಾಮಿನಿ, ನಿಶಿಕಾಂತ್ ಅವರ ಅಶ್ವಿನಿ ಆಸ್ಪತ್ರೆಯಲ್ಲಿ ಕೆಲಸ ಕ್ಕೆ ಸೇರಿ ಅದೇ ತಾನೇ ಒಂದು ತಿಂಗಳು. ನಿಶಿಕಾಂತ್ ನ

ಎಂ ಬಿ ಬಿ ಎಸ್ ಡಿಗ್ರಿ ಸಂಶಯಾಸ್ಪದ ಇದ್ದು ಆತ ಫೇಕ್ ಡಾಕ್ಟರ್ ಎಂದು ನಗರದಲ್ಲಿ ಸುದ್ದಿ ಹಬ್ಬಿರುವದು ಆಕೆಗೆ ತಿಳಿಯಿತು. ಆದರೆ ಆಕೆ ಏನೂ ಕಡಿಮೆ ಇಲ್ಲ. ಅವಳ ಡಿಪ್ಲೋಮ ಇನ್ ನರ್ಸಿಂಗ್ ಸರ್ಟಿಫಿಕೇಟ್ ಖೋಟ್ಟಿ ಎಂದು ಜನ ಆಡಿಕೊಂಡರು. ನಿಶಿಕಾಂತ್ ಬಗ್ಗೆ ತಿಳಿದು ಅವನ ಆಸ್ಪತ್ರೆ ಮುಚ್ಚುವ ಪರಿಸ್ಥಿತಿ ಇರುವದು ದಾಮಿನಿಗೆ ಗೊತ್ತಿದ್ದರೂ ಅವನ ಜೊತೆಗೆ ಉಳಿದ ಜೀವನ ಕಳೆಯಲು ಒಪ್ಪಿದಳು. ಇಬ್ಬರೂ ಒಂದಾದಮೇಲೆ ಎರಡು ವರ್ಷ ಅವರ ಜೀವನ ಸುಗಮವಾಗಿ ಸಾಗಿತು. ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ವೃದ್ಧಿ ಆಯಿತು. ಮೂರನೇ ವರ್ಷದಿಂದ ನೂತನ ಗೃಹ ಕಟ್ಟಿಸುವದು, ಪೀಠೋ ಪಕರಣ ಹಾಗೂ ಇತರ ವಿಷಯ ಗಳ ಬಗ್ಗೆ ಚರ್ಚೆ ಆಗಿ ವಿರಸ ಕೂಡ ಆಯಿತು. ಅವರು ಸತಿ ಪತಿ ಆಗಿ ಮೂರು ವರ್ಷ ಆದರೂ ದಾಮಿನಿ ತಾಯಿ ಆಗುವ ಭಾಗ್ಯದಿಂದ ವಂಚಿತ ಳಾದಳು ಎಂದು ತಿಳಿದ ನಿಶಿಕಾಂತ್ ಬುದ್ದಿ ಮೇಲೆ ಸೀಮಿತ ಕಳೆದುಕೊಂಡ. ಇದನ್ನು ಸ್ತ್ರೀ ರೋಗ ತಜ್ಞೆ ಅವರಿಂದ ಧೃಢ ಪಡಿಸಿಕೊಂಡರು.

ಒಂದು ದಿವಸ ಸಾಯಂಕಾಲ ದಾಮಿನಿ,

"ನಿಶಿ, ನನಗೆ ಮಕ್ಕಳು ಆಗುವ ಭಾಗ್ಯ ಇಲ್ಲದೆ ಹೋದರೆ, ಅನಾಥಾಶ್ರಮದಿಂದ ಒಂದು ಗಂಡು ಮಗು ದತ್ತು ತೆಗೆದು ಕೊಂಡು ಆ ಮಗುವನ್ನು ಪ್ರೀತಿಯಿಂದ ಬೆಳೆಸಿ ದೇಶದ ಉತ್ತಮ ನಾಗರಿಕನಾಗಿ ಮಾಡೋಣ," ಎಂದಳು.

ಈ ಸಲಹೆ ನಿಶಿಕಾಂತ್ ತಿರಸ್ಕರಿಸಿದ.

"ದಾಮಿನಿ, ಈಗಾಗಲೇ ನೂರು ಹೆರಿಗೆಗಳಿಗಿಂತ ಹೆಚ್ಚು ಯಶಸ್ವಿ ಆಗಿ ಮಾಡಿದ ಅನುಭವ ನಿನಗೆ ಇದೆ."

"ನಿಶಿ, ನಿನ್ನ ಮಾತಿನ ಅರ್ಥ ಆಗಲಿಲ್ಲ. ನಾನು ಏನು ಮಾಡಬೇಕು?"

ಆ ಸಮಯದಲ್ಲಿ ನಿಶಿಕಾಂತ್ ಭಯಂಕರ ಸಲಹೆ ಕೊಟ್ಟ. ಅದಕ್ಕೆ ದಾಮಿನಿ, "ಸಾಧ್ಯವಿಲ್ಲ," ಎಂದಳು.

ಇಬ್ಬರ ಮಧ್ಯ ಮಾತಿನ ಚಕಮಕಿ ಆಯಿತು. ಕೊನೆಗೆ ದಾಮಿನಿ ಅವನ ಸಲಹೆ ಒಪ್ಪದೇ ಅನ್ಯ ಮಾರ್ಗ ಇರಲಿಲ್ಲ.

ಅಂತಹ ಸಲಹೆ ಆದರು ಯಾವುದು?

ಆಗಲೇ ಒಂಭತ್ತು ತಿಂಗಳು ಗರ್ಭಿಣಿ ಮಹಿಳೆ ಇವರ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಳು. ಹೆರಿಗೆ ಕೊಟ್ಟ ದಿನಾಂಕ ಬಂದೆ ಬಿಟ್ಟಿತು. ಆಗ ಮಧ್ಯ ರಾತ್ರಿ. ಅವಳಿ ಜವಳಿ ಮಕ್ಕಳು ಆಗುವದು ಡಾಕ್ಟರ್ ಗೆ ಗೊತ್ತಾಯಿತು. ಗರ್ಭಿಣಿ ಪ್ರಸವ ವೇದನೆ ಆಗುತ್ತಿರುವ ಸಮಯ. ನಿಶಿಕಾಂತ್ ಬಂದು ದಾಮಿನಿ ಕಿವಿಯಲ್ಲಿ ಏನೋ ಹೇಳಿ ಹೊರಟು ಹೋದ. ಅದರಂತೆ ದಾಮಿನಿ ಒಂದು ಮಗುವನ್ನು ಗೌಪ್ಯವಾದ ಸ್ಥಳಕ್ಕೆ ರವಾನೆ ಮಾಡಿದಳು. ಆಗ ದಾಮಿನಿಗೆ ನೀನು ಪಾಪಿ ಆಗ ಬೇಡ ಎಂದು ಆಕೆಯ ಅಂತರಾತ್ಮ ಎಚ್ಚರಿಕೆ ಕೊಟ್ಟರೂ ವಹಿಸಿದ ಕೆಲಸ ಮಾಡಿಯೇ ಬಿಟ್ಟಳು. ಹೆರಿಗೆ ಅದ ತಾಯಿಗೆ ಇದಾವುದೂ ಗೊತ್ತಾಗದೇ ಹೋಯಿತು.

ಏಳು ದಿವಸ ಆದಮೇಲೆ ಮಹಿಳೆಗ ಮಗು ಜೊತೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದರು.

ಹದಿನೈದು ವರ್ಷಗಳು ಕಳೆದವು.

ಅವಳಿ ಮಕ್ಕಳು ಹೆತ್ತ ತಾಯಿ ಬೇರೆ ಯಾರೂ ಆಗಿರದೇ ಸ್ವಲ್ಪ ಸಮಯದ ಹಿಂದೆ ದಾಮಿನಿಗೆ ಬೋಗಿಯಲ್ಲಿ ಭೇಟಿ ಆದ ಪ್ರತಿಮಾ ಸೋಮಪುರ. ದಾಮಿನಿ ಆ ಮಗುವನ್ನು ಚೆನ್ನಾಗಿ ಪೋಷಣೆ ಮಾಡಿ ಬೆಳೆದು ನಿಂತ ಹದಿನೈದು ವರ್ಷದ ಬಾಲಕ ಸೂರ್ಯಕಾಂತ್. ಅವನು ಮಲ್ಲೇಶ್ವರಂ ಬೋರ್ಡಿಂಗ್ ಸ್ಕೂಲ್ ಬೆಂಗಳೂರು ನಗರದಲ್ಲಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿ. ಎರಡು ವರ್ಷ ಗಳ ಹಿಂದೆ ನಿಶಿಕಾಂತ್ ಕ್ಯಾನ್ಸರ್ ರೋಗದಿಂದ ಪೀಡಿತನಾಗಿ ಸಹಿಸಲಾರದ ನೋವಿನಿಂದ ಬಳಲಿ ಕೊನೆಯುಸಿರು ಎಳೆದ. ದಾಮಿನಿಯ ಆರೋಗ್ಯ ಹದಗೆಟ್ಟು ಹೋಯಿತು. ಆಕೆಗೆ ಬಂದಿರುವ ರೋಗಗಳು ಒಂದೇ ಎರಡೇ ಅನೇಕ. ಡಾಕ್ಟರ್ ಪ್ರಕಾರ ಆಕೆ ಜೀವಿಸುವ ಅವಧಿ ಆರು ತಿಂಗಳು ಎಂದರು.

ಟಿಕೆಟ್ ಎಕ್ಸಾಮಿನರ್ ಬಂದು ಟಿಕೆಟ್ ಕೇಳಿದಾಗ ದಾಮಿನಿ ತನ್ನ ಹಿಂದಿನ ನೆನಪು ಗಳಿಂದ ಹೊರಬಂದಳು.

ಬೆಂಗಳೂರು ಸಿಟಿ ನಿಲ್ದಾಣ ಬಂದ ಮೇಲೆ ಪ್ರವೀಣ್ ಹಾಗೂ ಪ್ರತಿಮಾ ಅವರಿಗೆ ಭೇಟಿ ಆಗಿ ಎಲ್ಲವನ್ನೂ ಹೇಳಿ ಪಾಪದಿಂದ ವಿಮುಕ್ತಿ ಆಗುವ ನಿರ್ಧಾರ ಮಾಡಿದಳು. ಕಠಿಣ ಶಿಕ್ಷೆ ಆದರೂ ಅನುಭವಿಸುವದಕ್ಕೆ ಸಿದ್ಧ ಎಂದು ಅಂದು ಕೊಂಡಳು. ರೈಲು ಸರಿಯಾದ ಸಮಯ ಎಂಟು ಗಂಟೆಗೆ ಬೆಂಗಳೂರು ಸಿಟಿ ಸ್ಟೇಷನ್ ತಲುಪಿತು. ನಿಲುಗಡೆ ಆದ ಕೂಡಲೇ ಪ್ರಯಾಣಿಕರು ಇಳಿಯಲು ಅವಸರ ಮಾಡಿದರು. ದಾಮಿನಿ ಕೆಳಗೆ ಇಳಿದು ಅವರನ್ನು ಹುಡುಕಿದಳು. ಬಹಳ ಗದ್ದಲ ಇರುವದರಿಂದ ಅವರು ಸಿಗುವದು ಕಷ್ಟ ವಾಯಿತು. ಹಾಗೆ ನಿರ್ಗಮನ ದ್ವಾರಕ್ಕೆ ಹೋದಳು. ಪ್ರವೀಣ್, ಪ್ರತಿಮಾ ಹಾಗೂ ಅವರ ಮಗ ಹೊರಗಡೆ ಹೋಗುವದನ್ನು ನೋಡಿ ಅವರನ್ನು ಓಡುತ್ತ ಹಿಂಬಾಲಿಸಿದಳು. ಅವರ ಸಮೀಪಕ್ಕೆ ಹೋಗಿ ಇಬ್ಬರಿಗೂ ಕೈ ಜೋಡಿಸಿ ಕಾಲು ಮುಟ್ಟಿ ನಮಸ್ಕಾರ ಮಾಡಿದಳು.

"ನೀನು ಯಾರು? ಏಕೆ ಹೀಗೆ ಮಾಡುತ್ತ ಇದ್ದಿ?" ಎಂದು ಕೇಳಿದರು ಪ್ರವೀಣ್.

ಆಗ ದಾಮಿನಿ ಹದಿನೈದು ವರ್ಷಗಳ ಹಿಂದೆ ಆದ ಘಟನೆಗಳನ್ನು ವಿವರಿಸಿದಳು. ವಿವರಿಸುವಾಗ ಆಕೆ ಕಣ್ಣಲ್ಲಿ ಒಂದೇ ಸಮನೆ ಕಣ್ಣೀರು.

ಇದನ್ನು ಕೇಳಿದ ಪ್ರತಿಮಾ ಎಚ್ಚರ ತಪ್ಪಿ ನೆಲದ ಮೇಲೆ ಬಿದ್ದಳು. ಆಕೆಯ ಪತಿ ಹಾಗೂ ಮಗ ಗಾಬರಿ ಆದರು. ವಾಟರ್ ಬಾಟಲ್ ನಲ್ಲಿ ಇರುವ ನೀರಿನಿಂದ ಪ್ರವೀಣ್ ಆಕೆ ಮುಖ್ಯದಮೇಲೆ ಸಿಂಪಡಿಸಿದ. ಎರಡು ನಿಮಿಷದಲ್ಲಿ ನಂತರ ಆಕೆಗೆ ಎಚ್ಚರವಾಗಿ ದಾಮಿನಿಗೆ ಕೇಳಿದ ಮೊದಲ ಪ್ರಶ್ನೆ,

"ಎಲ್ಲಿ ನನ್ನ ಮಗ?"

"ನನ್ನ ಜೊತೆಗೆ ಬನ್ನಿ. ನಿಮ್ಮ ಹದಿನೈದು ವರ್ಷದ ಮಗನನ್ನು ತೋರಿಸುವೆ."

ಎಲ್ಲರೂ ಉತ್ಸುಕತೆ ಹಾಗೂ ಒತ್ತಡದಲ್ಲಿ ಆಕೆಯನ್ನು ಹಿಂಬಾಲಿಸಿದರು. ಅರ್ಧ ಗಂಟೆಯಲ್ಲಿ ಮಲ್ಲೇಶ್ವರಂ ಬೋರ್ಡಿಂಗ್ ಶಾಲೆ ತಲುಪಿದರು. ಎಲ್ಲರಿಗೂ ಹೊರಗೆ ಬೆಂಚ್ ಮೇಲೆ ಕೂಡಿಸಿ ದಾಮಿನಿ ಒಬ್ಬಳೇ ಮಗನ ರೂಮಿಗೆ ಹೋದಳು. ತಾಯಿಯನ್ನು ಕಂಡು ಸೂರ್ಯಕಾಂತ ನಿಗೆ ಆನಂದ ವಾಯಿತು. ಆತ ತಾಯಿಯನ್ನು ತಬ್ಬಿಕೊಂಡು ಪ್ರೀತಿಯಿಂದ ಕೇಳಿದ.

"ಅಮ್ಮ ಹೇಗಿದ್ದಿಯಾ?"

"ಬೇಟಾ, ನಾನು ಚೆನ್ನಾಗಿ ಇದ್ದೇನೆ. ನಿನ್ನನ್ನು ನೋಡಲು ಕೆಲವು ಜನ ಬಂದಿರುವರು."

"ಯಾರಮ್ಮ ನನ್ನನ್ನು ನೋಡಲು ಬಂದವರು?"

"ಹೆದರಬೇಡ. ಅವರಿಗೆ ನಿನ್ನ ಭೇಟಿ ಆಗಲು ಹೇಳಿದರು."

"ಆಯಿತು, ಅವರನ್ನು ಒಳಗೆ ಕರೆ."

ದಾಮಿನಿ ಹೊರಗೆ ಬಂದು ಅವರನ್ನು ರೂಮಿನ ಒಳಗೆ ಬರಲು ಹೇಳಿದಳು. ಅದರಂತೆ ಅವರು ಒಳಗೆ ಹೋದಮೇಲೆ ಕಾದಿತ್ತು ಆಶ್ಚರ್ಯ. ಇಬ್ಬರೂ ಹುಡುಗರು ಒಂದೇ ತರಹ. ಅವರಿಬ್ಬರಲ್ಲಿ ಇರುವ ಒಂದೇ ಒಂದು ವ್ಯತ್ಯಾಸ ಸೂರ್ಯಕಾಂತನ ಹಣೆ ಮೇಲೆ ಮಚ್ಚೆ. ಸೂರ್ಯಕಾಂತನ ಪರಿಚಯ ಎಲ್ಲರಿಗೂ ದಾಮಿನಿ ಮಾಡಿದಳು. ಹದಿನೈದು ವರ್ಷಗಳ ಹಿಂದೆ ಆದ ಎಲ್ಲ ಘಟನೆಗಳನ್ನು ಸೂರ್ಯಕಾಂತ್ ನಿಗೆ ವಿವರಿಸಿದಳು. ಸೂರ್ಯಕಾಂತನಿಗೆ ಇದೆಲ್ಲ ತಿಳಿದುಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ಆ ಸಂದರ್ಭದಲ್ಲಿ ಅವನಿಗೆ ಏನೂ ಹೇಳಲು ಆಗದೇ ಗಾಂಭಿರ್ಯದಿಂದ ಇರುವದು ಗೋಚರವಾಯಿತು. ಸೂರ್ಯಕಾಂತ್ ಸಹೋದರ ಸುಪ್ರೀತ್ ನೋಡಿ ಆಶ್ಚರ್ಯ. ಕಾರಣ ಇಬ್ಬರೂ ಒಂದೇ ಹೋಲಿಕೆ. ಧೈರ್ಯದಿಂದ ಹೆತ್ತ ತಂದೆ ತಾಯಿಗೆ ತನಗೆ ಆಗಿರುವ ಸಂದೇಹಗಳನ್ನು ನಿವಾರಿಸಿಕೊಂಡು ಅವರಿಗೆ ಕಾಲು ಮುಟ್ಟಿ ನಮಸ್ಕಾರ ಮಾಡಿ ಒಂದು ಗಂಟೆ ಹಿರಿಯನಾದ ಅಣ್ಣ ಸುಪ್ರೀತ್ ಗೆ ಪ್ರೀತಿ ದ್ಯೋತಕ ಆಲಿಂಗನ ಮಾಡಿದ. ದಾಮಿನಿ ಈ ಹೃದಯ ವಿದ್ರಾವಕ ದೃಶ್ಯವನ್ನು ವೀಕ್ಷಿಸಿ ಭಾವುಕಳಾಗಿ ತೀವ್ರ ಹೃದಯಾಘಾತದಿಂದ ಕೊನೆಯುಸಿರು ಎಳೆದಳು.

ವಿನಾಶಕಾಲೇ ವಿಪರೀತ ಬುದ್ಧಿಯಿಂದ ಮಗು ಕಳ್ಳತನ ಮಾಡಿದ ದಂಪತಿಗಳಿಗೆ ದೇವರು ತಕ್ಕ ಶಿಕ್ಷೆ ಕೊಟ್ಟ. ಒಡ ಹುಟ್ಟಿದವರು ಒಂದಾಗಿ ರುವದು ಸೋಮಪುರ ಕುಟುಂಬಕ್ಕೆ ಆಗಿರುವ ಸಂತೋಷಕ್ಕೆ ಮಿತಿ ಇಲ್ಲ.