Doctor who walked as told in Kannada Short Stories by Vaman Acharya books and stories PDF | ನುಡಿದಂತೆ ನಡೆದ ಡಾಕ್ಟರ್

Featured Books
  • Reborn to be Loved - 2

    Ch 2 - Psycho शीधांश पीछले भाग में आपने पढ़ा…ये है हमारे शीध...

  • बन्धन प्यार का - 27

    बहू बैठो।हिना बैठ गयी थी।सास अंदर किचन में चली गयी थी।तब नरे...

  • कुआँ

    धोखा तहुर बहुत खुश हुआ था अपने निकाह पर। उसने सुना था अपनी ब...

  • डॉक्टर ने दिया नया जीवन

    डॉक्टर ने दिया नया जीवनएक डॉक्टर बहुत ही होशियार थे ।उनके बा...

  • आई कैन सी यू - 34

    अब तक हम ने पढ़ा की लूसी और रोवन उनके पुराने घर गए थे। वहां...

Categories
Share

ನುಡಿದಂತೆ ನಡೆದ ಡಾಕ್ಟರ್

ನುಡಿದಂತೆ ನಡೆದ ಡಾಕ್ಟರ್

(ಚಿಕ್ಕ ಕತೆ - ಲೇಖಕ ವಾಮನ ಆಚಾರ್ಯ)


ಪುಟ್ಟ ಗ್ರಾಮ ರಾಮಾಪುರದಲ್ಲಿ ಬೆಳಗಿನ ಎಂಟು ಗಂಟೆ ಸಮಯ ಮೋಡ ಕವಿದ ವಾತಾವರಣ. ಚಳಿಗಾಲದ ಕೊರೆಯುವ ಚಳಿ ಯಿಂದ ಜನರ ಸಂಚಾರ ಬಹಳ ಕಡಿಮೆ. ಅನಿರುದ್ಧ ಆಸ್ಪತ್ರೆ ಮುಂದೆ ಜನರ ಒಂದು ಗುಂಪು ಆರೋಗ್ಯ ತಪಾಸಣೆ ಗಾಗಿ ಬಂದರು. ಆಸ್ಪತ್ರೆ ಬಾಗಿಲು ಮುಚ್ಚಿರುವ ದರಿಂದ ಹೊರಗೆ ನಿಂತರು.

ಡಾಕ್ಟರ್ ಗೆ ಜನರು ಪ್ರೀತಿಯಿಂದ ಆನಿ ಎಂದು ಕರೆಯುತ್ತಿದ್ದರು.

“ಡಾಕ್ಟರ್ ಆನಿ ಯಾವಾಗಪ್ಪ ಬರೋದು? ಈಗ ಕ್ಯೂ ಮಾಡುವದು ಆಗುವದಿಲ್ಲ. ಡಾಕ್ಟರ್ ಗೆ ಮೊದಲು ತೋರಿಸುವ ವನು ಯಾರು?” ಎಂದ ಗುಡಿಸಲು ಹೋಟೆಲ್ ಮಾಲೀಕ ಮಣಿಕಂಠ.

“ಹೌದು, ಎಲ್ಲರಿಗೂ ಅವಸರ. ನನ್ನದೊಂದು ಸಲಹೆ. ವಯಸ್ಸಾದ ವರು, ಸಿರಿಯಸ್ ಪೇಶಂಟ್ ಹಾಗೂ ಚಿಕ್ಕ ಮಕ್ಕಳು ಮೊದಲು ತೋರಿಸಲಿ. ನಾನು ಕೊನೆಗೆ ತೋರಿಸುವೆ. ಇದರಂತೆ ಸರಿಯಾಗಿ ನಾನು ಲಿಸ್ಟ್ ಮಾಡುವೆ,”ಎಂದ ಹೈಸ್ಕೂಲ್ ಅಭ್ಯಾಸ ಅರ್ಧಕ್ಕೆ ನಿಲ್ಲಿಸಿದ ಯುವಕ ಹಾಗೂ ಸಮಾಜ ಸೇವಕ ಗಂಗಾಧರ ಶಾನುಭೋಗ.

“ನೀನು ಹೇಳುವದು ಸರಿ. ನಿನ್ನೊಬ್ಬನನ್ನು ಬಿಟ್ಟು ಉಳಿದವರೆಲ್ಲ ವಯಸ್ಸಾದವರು ಹಾಗೂ ಚಿಕ್ಕ ಮಕ್ಕಳು,” ಎಂದಳು ಹಣ್ಣು, ತರಕಾರಿ, ಹಾಲು ಮಾರುವ ಮುದುಕಿ ಶರಣಮ್ಮ ನಗುತ್ತ.

“ಆ ಕಂಪೌಂಡರ್ ರಾಜು ಇದ್ದಾನಲ್ಲ ಅವನು ಭಾಳ ಶಾಣೆ ಅದಾನ ಏನಾದರೂ ಮಾಡ ತಾನ,” ಎಂದ ಶಾನುಭೋಗ.

ಗ್ರಾಮ ಲೆಕ್ಕಿಗ ಉಮೇಶ್ ಹಾಸ್ಯ ಭರಿತ ಚುಟುಕಿಗಕಳನ್ನು ಹೇಳುವಾಗ ಎಲ್ಲರೂ ನಡುಗುತ್ತಿ ದ್ದರೂ ಜೋರಾಗಿ ನಗುತ್ತಾ ಚಳಿ ಮರೆತರು. ರತ್ನಮ್ಮ ಎನ್ನುವ ಮಹಿಳೆ ಗ್ರಾಮದ ಸಾಹುಕಾರ ಮನೆಯಲ್ಲಿ ಕೆಲಸ ಮಾಡುವಳು. ಆಕೆ ಬೆಚ್ಚ ಗಿನ ಬಟ್ಟೆ ಇಲ್ಲದೇ ನಡಗುವ ದನ್ನು ಗಮನಿಸಿದ ಶಾನುಭೋಗನಿಗೆ ಕನಿಕರ ಬಂದು ತಾನು ಹೊದ್ದು ಕೊಂಡ ಶಾಲನ್ನು ಆಕೆಗೆ ಹೊದಿಸಿದ. ಆಕೆ ಅವನಿಗೆ ಆಶೀರ್ವಾದ ಮಾಡುತ್ತ,

“ನಿನಗೆ ಒಳ್ಳೆಯದಾಗಲಿ ಬೇಗನೆ ಮದುವೆ ಮಾಡಿಕೋ,” ಎಂದಳು.

ಶಾನುಭೋಗ ತಾನು ಹೇಳಿದಂತೆ ಲಿಸ್ಟ್ ರೆಡಿ ಮಾಡಿದ.

ಒಂದು ಗಂಟೆ ತಡವಾದರೂ ಡಾಕ್ಟರ್ ಬರದೇ ಇದ್ದರೂ ಅಲ್ಲಿದ್ದ ಜನರಿಗೆ ಸಿಟ್ಟು ಬರಲಿಲ್ಲ.

“ಪಾಪ, ಡಾಕ್ಟರ್ ಅವರಿಗೆ ಮನೆಗೆ ಕರೆಯುವ ವರು ತುಂಬಾ ಜನ. ಅವರು ಯಾರದೋ ಮನೆಯಲ್ಲಿ ಸಿರಿಯಸ್ ಪೇಶಂಟ್ ನೋಡುತ್ತಾ ಇರಬಹುದು,” ಎಂದಳು ಪ್ರಾಥಮಿಕ ಶಾಲಾ ಶಿಕ್ಷಕಿ ನಾಗರತ್ನ.

“ಡಾ.ಅನಿರುದ್ಧ, ಎಮ್ ಡಿ (ಜನರಲ್ ಮೆಡಿಸನ್) ಇದ್ದು ಬೆಂಗಳೂರಿನಲ್ಲಿ ಬಿಜಿ ಡಾಕ್ಟರ್. ಒಂದು ವರ್ಷದ ಹಿಂದೆ ರಾಮಾಪುರ ಗ್ರಾಮಕ್ಕೆ ಏಕೆ ಬಂದರು ಯಾರಿಗಾದರೂ ಗೊತ್ತೇ? ಎಂದು ಕೇಳಿದ ಗ್ರಾಮದ ವಯೋ

ವೃದ್ಧ ಮಾಜಿ ಗ್ರಾಮ ಪಂಚಾಯತ್ ಚೇರ್ ಮನ್ ಶಂಕರಪ್ಪ.

ಅಷ್ಟರಲ್ಲಿ ಕಂಪೌಂಡರ್ ರಾಜು ಬಂದ. ಆಸ್ಪತ್ರೆ ಬಾಗಿಲು ತೆಗೆದು ಎಲ್ಲರನ್ನು ಆಸನದಮೇಲೆ ಶಾಂತ ವಾಗಿ ಕುಳಿತು ಕೊಳ್ಳಲು ಕೈ ಜೋಡಿಸಿ ಹೇಳಿದ. ಡಾಕ್ಟರ್ ಅವರಿಗೆ ದೂರವಾಣಿ ಕರೆ ಮಾಡಿ ಪರಿಸ್ಥಿತಿ ವಿವರಿಸಿದ.

ಮುಂದೆ ಐದು ನಿಮಿಷದಲ್ಲಿ ಡಾಕ್ಟರ್ ಬಂದ ಕೂಡಲೇ ನಗುತ್ತ ಎಲ್ಲರಿಗೂ ಕ್ಷಮಿಸಿ ಎಂದರು. ಅವರಿಗೆ ಐವತ್ತು ವರ್ಷ ದಾಟಿ ದರೂ ತುಂಬಾ ಎಕ್ಟಿವ್ ಇದ್ದರು. ಆಗಲೇ ಶಾನುಭೋಗ ಸಿದ್ಧ ಪಡಿಸಿದ ಲಿಸ್ಟ ಪ್ರಕಾರ ಒಬ್ಬೊಬ್ಬ ರಾಗಿ ಒಳಗೆ ಕರೆಯುವಂತೆ ರಾಜು ಗೆ ಡಾಕ್ಟರ್ ಹೇಳಿದರು.

ರಾಜು ಕೆಮ್ಮುತ್ತ ತನ್ನ ಗಂಟಲು ಸುಧಾರಿಸಿ ಕೊಂಡು ನೀರು ಕುಡಿದು,

‘ಮಣಿಕಂಠ’ ಎಂದು ಕೂಗಿದ.

ಎಪ್ಪತೈದು ವರ್ಷದ ಮಣಿಕಂಠ ಕಳೆದ ಮೂವತ್ತು ವರ್ಷದಿಂದ ಗ್ರಾಮದ ತನ್ನ ಗುಡಿಸಲು ಹೋಟೆಲ್ ನಲ್ಲಿ ಸುಸಲಾ, ಖಾರಾ, ಭಜಿ ಹಾಗೂ ಗರಂ ಗರಂ ಚಹಾ ಮಾಡುವನು. ಗ್ರಾಹಕರು ರುಚಿಯಾದ ಆಹಾರ ಪದಾರ್ಥ ಗಳನ್ನು ಸವಿದು ಬಿಲ್ ಕೊಡುವಾಗ ಮಣಿಕಂಠ ನಿಗೆ ತಮಾಷೆ ಮಾಡುವರು. ಬೆಳಗ್ಗೆ ಏಳು ಗಂಟೆ ಯಿಂದ ಸಾಯಂಕಾಲ ಏಳು ಗಂಟೆ ವರೆಗೆ ಅವನ ವ್ಯಾಪಾರ. ಮಣಿಕಂಠನ ಸಹಾಯಕ ಅವನ ಮಗ ಶಿವು ಚೂಟಿ ಇದ್ದು ಗ್ರಾಹಕರನ್ನು ಆಕರ್ಷಣೆ ಮಾಡುತ್ತಿದ್ದ.

“ಏನು, ಮಣಿಕಂಠ ಹುಷಾರು ಇಲ್ವಾ,” ಎಂದು ಕೇಳಿದರು ಡಾಕ್ಟರ್.

“ಹೌದು ಸ್ವಾಮಿ, ಇವತ್ತು ಬೆಳಗ್ಗೆ ಎದ್ದ ಕೂಡಲೇ ಮೈ ಕೈ ಹೊಡೆತ, ವಿಪರೀತ ತಲೆಶೂಲೆ ಸುಸ್ತಾಗಿದೆ,” ಎಂದ.

ಡಾಕ್ಟರ್ ಅವನನ್ನು ಪರೀಕ್ಷಿಸಿ ತಮ್ಮ ಹಿಂದೆ ಇರುವ ಮಾತ್ರೆಗಳ ರಾಶಿಯಲ್ಲಿ ಹತ್ತು ಮಾತ್ರೆಗಳು ಇರುವ ಒಂದು ಸ್ಟ್ರಿಪ್ ತೆಗೆದು ಅದನ್ನು ಅವನಿಗೆ ಕೊಟ್ಟರು. ಇದನ್ನು ಊಟ ಆದಮೇಲೆ ಮಧ್ಯಾನ್ಹ ಮತ್ತು ರಾತ್ರಿ ಐದು ದಿವಸ ತಗೋ ಆರಾಮ ಆಗುವದು ಎಂದರು.

ನಂತರ ಮಣಿಕಂಠ ತನ್ನ ದೋತರದಲ್ಲಿ ಇಟ್ಟ ಹಣ ತೆಗೆದು ಟೇಬಲ್ ಮೇಲೆ ಇಟ್ಟ.

ಅವುಗಳನ್ನು ಎಣಿಸಿದೇ ಎಲ್ಲವನ್ನೂ ವಾಪಸ್ ಕೊಟ್ಟು ಕೇವಲ ಒಂದು ರೂಪಾಯಿ ಕಾಯಿನ್ ತೆಗೆದು ಕೊಂಡರು.

ಹೊರಡುವಾಗ ಮಣಿಕಂಠ ಭಾವೋದ್ರೇಕ ದಿಂದ ಡಾಕ್ಟರ್ ಕಾಲು ಮುಟ್ಟಲು ಹೋದಾಗ ಅವನನ್ನು ತಡೆದು,

“ಮಣಿಕಂಠ ನೀವು ಹಿರಿಯರು ಹಾಗೆಲ್ಲ ಮಾಡಬಾರದು,”ಎಂದರು.

“ರತ್ನಮ್ಮ” ಎಂದು ಕರೆದ ರಾಜು.

ಅರವತ್ತರ ಗಾಡಿ ದಾಟಿದ ರತ್ನಮ್ಮ ಓಡುತ್ತ ಬಂದಳು.

“ಇದೇನು ರತ್ನಮ್ಮ, ನಿನಗೆ ಓಡುವ ಸ್ಪರ್ಧೆಗೆ ಕಳಿಸಬೇಕು. ಏನಾಗಿದೆ ನಿನಗೆ?”ಎಂದು ಕೇಳಿದರು ಡಾಕ್ಟರ್.

“ಅಣ್ಣಾವ್ರೆ ನಿನ್ನೆಯಿಂದ ಹೊಟ್ಟೆ ಶೂಲೆ ಜೊತೆಗೆ ಮೈ ಬೆಚ್ಚಗೆ ಆಗಿದೆ.”

ಆಕೆ ಪರೀಕ್ಷೆ ಮಾಡುವ ಟೇಬಲ್ ಮೇಲೆ ಮಲಗಿದ ಮೇಲೆ ಹೃದಯ ಬಡಿತ ಹಾಗೂ ರಕ್ತ ಒತ್ತಡ ಪರೀಕ್ಷಿಸಿ ಕುಳಿತುಕೊ ಎಂದರು.

“ರತ್ನಮ್ಮಾ ಗಾಬರಿ ಆಗಬೇಡ. ಎಲ್ಲವೂ ನಾರ್ಮಲ್ ಇದೆ. ಈ ಬಾಟಲ್ ನಲ್ಲಿ ಇರುವ ಸಿರಪ್ ಊಟ ಆದಮೇಲೆ ಒಂದು ಚಮಚ ಎರಡು ಸಲ ತೆಗೆದುಕೋ ಮೂರು ದಿವಸದಲ್ಲಿ ಆರಾಮ ಆಗುವಿ,” ಎಂದರು.

ಆಕೆ ಮನೆಯಲ್ಲಿ ಚಟ್ನಿ ಪುಡಿ, ಮೆಂತೆದ ಹಿಟ್ಟು ತಯಾರಿಸುವಳು. ತನ್ನ ಬ್ಯಾಗ ನಲ್ಲಿ ಇದ್ದ ಎರಡು ಪ್ಯಾಕೆಟ್ ಕೊಟ್ಟು ಇದು ನಾನು ಕೊಡುವ ಫೀಸ್ ಎಂದಳು ನಗುತ್ತ.

ಡಾಕ್ಟರ್ ಒಂದು ಕವರ್ ಅಷ್ಟೇ ಸ್ವೀಕರಿಸಿ ದರು. ಆಕೆಗೆ ಮನೆಗೆ ಹೋಗು ಎಂದರು.

ಶಂಕಪ್ಪ ಎಂದು ಕೂಗಿದ ರಾಜು.

ಆತ ಕೂತಲ್ಲೇ ನಿದ್ರೆ ಹೊಡೆಯುತ್ತಿದ್ದ. ಪಕ್ಕದ ವನು ಆತನಿಗೆ ಎಬ್ಬಿಸಿ ಕಳಿಸಿದರು.

“ಏನ್ರಿ ಶಂಕ್ರಪ್ಪ ರಾತ್ರಿ ನಿದ್ರೆ ಮಾಡಿಲ್ಲವೇ? ಏನಾಗಿದೆ?” ಎಂದು ಕೇಳಿದರು ಡಾಕ್ಟರ್.

“ಸ್ವಾಮಿ ನನಗೆ ನಿನ್ನೆ ರಾತ್ರಿ ತಲೆ ಚಕ್ಕರ್ ಬಂದು ಕುಸಿದು ನೆಲದಮೇಲೆ ಬಿದ್ದೆ. ಮಗ ಎಬ್ಬಿಸಿ ಹಾಸಿಗೆ ಮೇಲೆ ಮಲಗಿಸಿದ.”

ಆಗ ಡಾಕ್ಟರ್ ಸ್ಟೇತಸ್ಕೊಪ್ ನಿಂದ ಆತನ ಹೃದಯ ಬಡಿತ, ಶುಗರ್ ಲೆವೆಲ್ ನೋಡಿ,

“ಶಂಕರಪ್ಪ ನಿಮ್ಮ ವಯೋಮಾನ ಪ್ರಕಾರ ಹೀಗೆ ಆಗಿವದು ಸಹಜ. ಗಾಬರಿ ಆಗ ಬೇಡಿ. ನೀರು ಬಹಳ ಕುಡಿಯಿರಿ,” ಎಂದರು.

ಅವರಿಗೆ ವಿಟಾಮಿನ್ ಮಾತ್ರೆಗಳು ಹಾಗೂ ಟಾನಿಕ್ ಕೊಟ್ಟು ದಿನಾಲು ಮೂರು ಸಲ ತಗೊಳ್ಳಿ ಎಂದರು.

ಶಂಕರಪ್ಪ ತನ್ನ ಬನಿಯನ್ ಎರಡೂ ಬದಿಯ ಜೇಬ್ ನಲ್ಲಿ ಕೈ ಹಾಕಿ ಅಲ್ಲಿ ಪ್ಲಾಸಿಕ್ ನಲ್ಲಿ ಇರುವ ಹಣ ಕೊಟ್ಟ. ಇದರಲ್ಲಿ ಡಾಕ್ಟರ್ ಒಂದು ರೂಪಾಯಿ ತಕ್ಕೊಂಡು ಬ್ಯಾಗ್ ವಾಪಸ್ ಕೊಟ್ಟರು.

“ಶರಣಮ್ಮ ಬೇಗ ಬಾ,” ಎಂದು ರಾಜು ಕೂಗಿದ.

ಆಕೆಗೆ ಮೊಣಕಾಲು ನೋವು ಇರುವದರಿಂದ ಚೇರ್ ದಿಂದ ಏಳಲು ಕಷ್ಟವಾಯಿತು. ತನ್ನ ದೊಡ್ಡ ಬ್ಯಾಗ್ ಜೊತೆಗೆ ಡಾಕ್ಟರ್ ಕಡೆ ಹೋದಳು.

“ಶರಣಮ್ಮ, ಏನಾಗಿದೆ?”

“ಅಪ್ಪ, ಮೊಣಕಾಲು ನೋವು ವಿಪರೀತ,” ಎಂದಳು.

ಡಾಕ್ಟರ್ ಆಕೆ ಮೊಳಕಾಲು ಪರೀಕ್ಷಿಸಿ ಮಾತ್ರೆಗಳು ಹಾಗೂ ಆಯಿಂಟ್ ಮೆಂಟ್ ಕೊಟ್ಟರು. ಹೇಗೆ ಉಪಯೋಗಿಸಬೇಕು ಎನ್ನುವದು ಹೇಳಿದರು.

ನಂತರ ಆಕೆ ತನ್ನ ಬ್ಯಾಗಿನಿಂದ ಬಾಳೆಹಣ್ಣು, ಅರ್ಧ ಕೆ ಜಿ ಮೊಸರು, ಬೆಣ್ಣೆ ಹಾಗೂ ತುಪ್ಪ ಕೊಟ್ಟು,

“ಇದು ಸ್ವಂತ ಮನೆ ಹಯನ ದಿಂದ ಮಾಡಿದ್ದು,”

ಬರಿ ಬಾಳೆಹಣ್ಣು ತೆಗೆದುಕೊಂಡು ಉಳಿದದ್ದು ವಾಪಸ್ ಕೊಟ್ಟರು. ಆಕೆ ನಮಸ್ಕಾರ ಮಾಡಿ ಹೋದಳು.

“ಉಮೇಶ್ ಅವರೇ ಬರಬೇಕು,” ಎಂದು ರಾಜು ಜೋರಾಗಿ ಕೂಗಿದ.

ಆತ ಡಾಕ್ಟರ್ ಹತ್ತಿರ ಹೋದ.

“ಹಾಸ್ಯಗಾರರೇ, ಏನಾಗಿದೆ?”

“ಡಾಕ್ಟರ್ ಸಾಹೇಬರೆ, ನಿನ್ನಯಿಂದ ನನಗೆ ವಾಂತಿ ಭೇದಿ ಆಗುತ್ತಾ ಇದೆ.”

“ಮೂರು ದಿವಸ ಈ ಮಾತ್ರೆ ತೊಗೊಳ್ಳಿ ಆರಾಮ ಆಗುತ್ತದೆ.”

ಉಮೇಶ್, ತನ್ನ ಪರ್ಸ್ ತೆಗೆದು ಒಂದು ನೂರು ರೂಪಾಯಿ ಫೀಸ್ ಕೊಟ್ಟ. ಅವನಿಗೂ ಉಳಿದವರಂತೆ ಒಂದು ರೂಪಾಯಿ ತೆಗೆದುಕೊಂಡರು.

ನಂತರ ರಾಜು, ಮನೋಹರ ಹತ್ತು ವರ್ಷದ ಹುಡುಗ ನನ್ನು ಕರೆದ. ಆ ಬಾಲಕ ಶಂಕ್ರಪ್ಪನವರ ಮೊಮ್ಮಗ.

“ಏನೋ ಪುಟ್ಟ ನಿನಗೇನಾಗಿದೆ?” ಎಂದು ಕೇಳಿದರು ಡಾಕ್ಟರ್.

“ದಾಕ್ಟ್ರೇ, ನಿನ್ನೆ ನಾನು ಸ್ನೇಹಿತರ ಜೊತೆಗೆ ಮಳೆಯಲ್ಲಿ ಬಹಳ ಹೊತ್ತು ಆಟ ಆಡಿ ಮನೆಗೆ ಬಂದೆ. ರಾತ್ರಿಯೆಲ್ಲ ವಿಪರೀತ ಜ್ವರ.”

ಡಾಕ್ಟರ್ ರಾಜುಗೆ ಕರೆದು ಮಾತ್ರೆ ಹೆಸರು ಹೇಳಿ ಒಳಗಿನಿಂದ ತೆಗೆದುಕೊಂಡು ಬಾ ಎಂದರು.

“ಪುಟ್ಟ ಈ ಮಾತ್ರೆ ಮೂರು ದಿವಸ ಊಟ ಆದಮೇಲೆ ತಗೋ. ನಿನ್ನ ಫೀಸ್ ಆಗಲೇ ನಿನ್ನ ಅಜ್ಜ ಕೊಟ್ಟಿದ್ದಾರೆ ಹೋಗು ಎಂದರು.

‘ನಾಗರತ್ನ ಬೇಗ ಬಾ’ ಎಂದು ಕೂಗಿದ ರಾಜು.

ಆಕೆ ಅವಸರದಿಂದ ಬರುವಾಗ ಕಾಲು ಜಾರಿ ಬೀಳುವದರಲ್ಲಿ ಶಾನುಭೋಗ ಆಕೆಗೆ ಅನಾಹುತ ವಾಗುವದನ್ನು ತಪ್ಪಿಸಿ ಆಪದ್ ಬಾಂಧವ ಆದ.

ಏನಮ್ಮ ನಾಗರತ್ನ ನಿನಗೇನಾಗಿದೆ?

“ಡಾಕ್ಟರ್ ಸಾಹೇಬರೇ, ನಿಮಗೆ ವೈಯಕ್ತಿಕ ವಾಗಿ ಹೇಳಬೇಕು,” ಎಂದಳು ನಗುತ್ತ.

“ಅದೇನಮ್ಮ ಬೇಗ ಹೇಳು. ಯಾರಿಗೂ ಕೇಳಿಸುವದಿಲ್ಲ.”

“ಡಾಕ್ಟರೆ, ನನಗೆ ಪ್ರೇಮ ರೋಗ ಆಗಿದೆ. ಅದಕ್ಕೆ ಔಷಧ ಹೊರಗೆ ಕುಳಿತ ಯುವಕ ಗಂಗಾಧರ್ ಶಾನುಭಾಗ್ ಅವನ ಮೇಲೆ ಪ್ರೀತಿ ಆಗಿದೆ ಮದುವೆ ಮಾಡಿಸಿ.”

ಡಾಕ್ಟರ್ ಗೆ ಆಶ್ಚರ್ಯ.

ನಾನು ಡಾಕ್ಟರ್ ಇದ್ದು ಪ್ರೇಮಿಗಳನ್ನು ಒಂದು ಮಾಡಬೇಕೆ? ಎಂದು ಅಂದು ಕೊಂಡರು.

“ನಾಗರತ್ನ ನಾನು ರೋಗಿಗಳಿಗೆ ರೋಗ ವಾಸಿ ಮಾಡುವ ಡಾಕ್ಟರ್. ಪ್ರೇಮ ರೋಗಿಗಳಿಗೆ ಅಲ್ಲ.”

“ನನಗೆ ಗೊತ್ತು ಸಾರ್. ನೀವು ಈಗ ನನ್ನ ತಂದೆ ಸ್ಥಾನ ದಲ್ಲಿ ಇದ್ದೀರಿ. ಇದೊಂದು ಪುಣ್ಯದ ಕೆಲಸ ಮಾಡಿ,” ಎಂದು ಹೇಳಿ ಡಾಕ್ಟರ್ ಕಾಲು ಮುಟ್ಟಿ ನಮಸ್ಕಾರ ಮಾಡಿದಳು.

“ಆಯಿತು, ಹೊರಗೆ ಕೂಡು,” ಎಂದರು.

“ಗಂಗಾಧರ್ ಶಾನುಭೋಗ ಬೇಗ ಬನ್ನಿ,” ಎಂದು ಕರೆದ ರಾಜು.

ಅದರಂತೆ ಶಾನುಭೋಗ್, ಡಾಕ್ಟರ್ ರೂಮಿನ ಒಳಗೆ ಹೋದ.

“ಏನ್ರಿ ಶಾನು ಭೋಗರೇ, ನೀವು ಸಮಾಜ ಸೇವಕ ಅಂತಾ ಗೊತ್ತು. ನಮ್ಮ ಆಸ್ಪತ್ರೆಯಲ್ಲಿ ನಿಮ್ಮದೇನು ಕೆಲಸ?”

“ನಿಮ್ಮ ಆಸ್ಪತ್ರೆ ಮುಂದೆ ಜನರ ನಿಂತಿರುವ

ದನ್ನು ನೋಡಿ ಬಂದೆ.”

“ನಿಮ್ಮ ಸಹಾಯಕ್ಕೆ ಧನ್ಯವಾದ.”

“ಅದೇನು ಬೇಗ ಹೇಳಿ.”

“ಈಗ ತಾನೇ ಬಂದ ನಾಗರತ್ನ ಳ ಮೇಲೆ ಪ್ರೇಮ ಅಂಕುರ ವಾಗಿದೆ. ಆಕೆಗೆ ಹೇಳಲು ಧೈರ್ಯ ಇಲ್ಲ.”

“ಶಾನುಭೋಗ, ಇಬ್ಬರೂ ಒಪ್ಪಿಗೆ ಕೊಟ್ಟ ಮೇಲೆ ನನ್ನದೇನು ಕೆಲಸ.”

ಡಾಕ್ಟರ್ ಇಬ್ಬರಿಗೂ ಒಳಗೆ ಕರೆಸಿ ಅವರ ಕೈ ಗಳನ್ನು ಕೂಡಿಸಿ ‘ಮಾಂಗಲ್ಯಮ್ ತ0ತೂ ನಾನೆನ ಮಮ ಜೀವನ ಹೇತುನ’ ಎಂದು ಆಶೀರ್ವಾದ ಮಾಡಿ ಮದುವೆ ಶುಭಸ್ಯ ಶೀಘ್ರ0 ಆಗಲಿ ಎಂದರು.

ಒಂದು ವರ್ಷದ ಅವಧಿ ಯಲ್ಲಿ ಡಾಕ್ಟರ್ ಅವರಿಗೆ ಇಂತಹ ಅನುಭವಗಳು ಒಂದೇ, ಎರಡೇ, ನೂರಾರು. ಈ ಅನುಭಗಳ ಮೇಲೆ ಪುಸ್ತಕ ಬರೆಯಲು ನಿರ್ಧರಿಸಿದರು.

ಆಗ ಸಮಯ ಮಧ್ಯಾಹ್ನ ಎರಡು ಗಂಟೆ.

ಆಸ್ಪತ್ರೆಯಲ್ಲಿ ಉಳಿದವರು ಡಾ. ಅನಿರುದ್ಧ ಹಾಗೂ ಕಂಪೌಂಡರ್ ರಾಜು.

ಅನಿರುದ್ಧ ಬೆಂಗಳೂರು ಬಿಟ್ಟು ಈ ಗ್ರಾಮಕ್ಕೆ ಬಂದು ಇಂದಿಗೆ ಒಂದು ವರ್ಷ.

“ರಾಜು ನೀನು ಊಟ ಮಾಡಿ ಬಾ. ನಾನು ಇಲ್ಲಿಯೇ ವಿಶ್ರಾಂತಿ ತೆಗೆದು ಕೊಳ್ಳುತ್ತೇನೆ.”

ಏಕಾಂಗಿ ಆದರೆ ಹಿಂದಿನ ನೆನಪುಗಳು ಬರುವದು ಸಹಜ. ಹಾಗೆ ಆಯಿತು.

ಇಪ್ಪತ್ತೈದು ವರ್ಷ ಗಳ ಹಿಂದೆ ಬೆಂಗಳೂರು ಮೆಡಿಕಲ್ ಕಾಲೇಜ್ ನಿಂದ ಎಮ್ ಡಿ ಜನರಲ್ ಮೆಡಿಸನ್ಸ ಮುಗಿಸಿದ ಮೇಲೆ ಒಂದು ವರ್ಷ ಕೆಲಸ ಸಿಗದೇ ಹೋಯಿತು. ಕೊನೆಗೆ ಒಬ್ಬ ಪುಣ್ಯಾತ್ಮ ಕ್ಲಿನಿಕ್ ತೆಗೆಯಲು ಸಲಹೆ ಕೊಡುವದಲ್ಲದೆ ಸೂರ್ಯನಾರಾಯಣ ಬಡಾವಣೆ ಯಲ್ಲಿ ಒಂದು ಮನೆ ಕೂಡಾ ಕೊಡಿಸಿದ. ಮೊದಲನೇ ವರ್ಷದ ಪ್ರಾಕ್ಟೀಸ್ ನಿರಾಶಾದಾಯಕ ವಾಯಿತು. ಎರಡನೇ ವರ್ಷ ದಿಂದ ವರ್ಷದಿಂದ ಅಸೆ ಯ ಚಿಲುಮೆ ಚಿಗುರಿತು. ಅದೇ ವರ್ಷ ಸ್ತ್ರೀ ರೋಗ ತಜ್ಞೆ ಸಂಜನಾ ಜೊತೆಗೆ ಮದುವೆ ಆಯಿತು. ಅವಳ ಮನೆ ಸಂಜು ಕ್ಲಿನಿಕ್ ಆಯಿತು. ಇಬ್ಬರೂ ಕೂಡಿ ವೈದ್ಯ ವೃತ್ತಿ ವೃದ್ಧಿ ಆಗುತ್ತಾ ಹೋಗಿ ಇಪ್ಪತ್ತೈದು ವರ್ಷದಲ್ಲಿ ಇಬ್ಬರೂ ಪ್ರಸಿದ್ದ ಡಾಕ್ಟರ್ಸ್ ಆಗಿ ಆದಾಯ ಹೆಚ್ಚಾಯಿತು. ಮಕ್ಕಳು ಆಗದೇ ಇರುವ ಕೊರಗು.

ಒಂದು ದಿವಸ ರಾತ್ರಿ ಊಟವಾದ ಮೇಲೆ ಸಂಜನಾ,

“ನಮ್ಮ ವೃತ್ತಿಯಲ್ಲಿ ಅಸಾಧ್ಯವನ್ನು ಸಾಧ್ಯ ಮಾಡ ಬಹುದೇ?” ಎಂದು ಕೇಳಿದಳು.

“ಖಂಡಿತವಾಗಿ ಮಾಡ ಬಹುದು. ನನ್ನ ತಲೆಯಲ್ಲಿ ಒಂದು ಆದರ್ಶ ವಿಚಾರ ಬಂದಿದೆ. ನಾನು ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಬೇಕಾದಷ್ಟು ಗಳಿಸಿದ್ದೇನೆ. ಇದರ ಸ್ವಲ್ಪ ಭಾಗ ವನ್ನಾದರೂ ಸಮಾಜ ಸೇವೆ ಯಂಥ ಆದರ್ಶ ಕೆಲಸಕ್ಕಾಗಿ ವಿನಿಯೋಗ ಮಾಡಿದರೆ ಹೇಗೆ?” ಎಂದ.

“ಆನಿ, ಉಡಾಫೆ ಮಾತಾಡುವ ದರಲ್ಲಿ ನೀನು ನಿಸ್ಸಿಮ. ನಿಜವಾಗಿಯೂ ನಿನ್ನ ಮಾತಿನ ಮೇಲೆ ಸೀರಿಯಸ್ ಇದ್ದರೆ ಕ್ರಿಯಾ ರೂಪ ದಲ್ಲಿ ತಂದರೆ ಭೇಷ್ ಅನ್ನುತ್ತೇನೆ.”

ಅನಿರುದ್ಧನಿಗೆ ಇದು ಪ್ರತಿಷ್ಠೆ ವಿಷಯ ವಾಯಿತು.

“ಸಂಜು, ನೀನು ನನಗೆ ಕೊಟ್ಟ ಚಾಲೆಂಜ್ ಒಪ್ಪಿಗೆ. ಬರುವ ಗುರುವಾರ ಹೊರಡು ತ್ತೇನೆ,”ಎಂದ.

“ಎಲ್ಲಿಗೆ ಹೋಗುತ್ತಿ?”

“ಇಲ್ಲಿಂದ 200 ಕಿಲೋಮೀಟರ್ ದೂರ ಇರುವ ರಾಮಾಪುರ ಗ್ರಾಮಕ್ಕೆ ಹೋಗಲು ಈಗಾಗಲೇ ವ್ಯವಸ್ಥೆ ಆಗಿದೆ,” ಎಂದ.

ಸಂಜನಾ ಗೆ ಆಶ್ಚರ್ಯ ದ ಜೊತೆಗೆ ಸಂತಸವೂ ಆಯಿತು.

ಆಗ ಆಕೆ, “ಆನಿ, ನಿನ್ನ ಆದರ್ಶ ಕೆಲಸಕ್ಕೆ ನನ್ನ ಸಂಪೂರ್ಣ ಬೆಂಬಲ.”

ನಿಗದಿತ ದಿವಸ ಅನಿರುದ್ಧ, ಕಂಪೌಂಡರ್ ರಾಜು ಗೆ ಕರೆದುಕೊಂಡು ಹೊರಟೆ ಬಿಟ್ಟ.

ಆಗಲೇ ರಾಮಾಪುರ ಗ್ರಾಮ ದ ಸಾಹುಕಾರ ಅವರಿಗೆ ತಿಳಿಸಿ ಆಗಿತ್ತು.

ರಾಜೂ ಊಟ ಮುಗಿಸಿ ಬಂದು ಆಸ್ಪತ್ರೆ ಬಾಗಿಲು ಮುಚ್ಚಲು ಕೇಳಿದಾಗ ಅನಿರುದ್ಧ ನೆನಪುಗಳನ್ನು ನಿಲ್ಲಿಸಿ ಹೊರಗೆ ಬಂದರು.

ಒಂದು ವಾರ ಬಿಟ್ಟು ಬೆಂಗಳೂರು ವಾಪಸ್ ಹೋಗುವದು ಗ್ರಾಮದ ಎಲ್ಲರಿಗೂ ಗೊತ್ತಾಯಿತು. ಅಂದು ಡಾಕ್ಟರ್ ಬೀಳ್ಕೊಡಲು ಇಡೀ ಗ್ರಾಮಸ್ಥರು ಬಂದರು. ಅವರಲ್ಲಿ ಕಣ್ಣಲ್ಲಿ ನೀರು ಬಂದವರೆ ಬಹಳ. ತಮ್ಮ ವ್ಯಥೆ ಗಳನ್ನು ವ್ಯಕ್ತ ಪಡಿಸಿದರು. ಗ್ರಾಮಸ್ಥರು ಸೇರಿ ಡಾಕ್ಟರ್ ಡಾಕ್ಟರ್ ಗೆ ಹಾಗೂ ಕಂಪೌಂಡರ್ ಗೆ ಅಪರೂಪದ ಗಿಫ್ಟ್ ಗಳನ್ನು ಕೊಟ್ಟರು.

ಕಾರ್ ಬಿಡುವ ವರಿಗೆ ಎಲ್ಲರೂ ಅಲ್ಲಿಯೇ ಇದ್ದರು.

ನುಡಿದಂತೆ ನಡೆದ ಎನ್ನುವ ಕೀರ್ತಿ ಡಾ. ಅನಿರುದ್ಧ ನಿಗೆ ಬಂದಿತು.