ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ
(ಚಿಕ್ಕ ಕಥೆ ಲೇಖಕ- ವಾಮನಾಚಾರ್ಯ)
ಬೆಳಗಿನ ಒಂಭತ್ತು ಗಂಟೆ ಸಮಯ. ಟ್ರಿನ್ ಟ್ರಿನ್ ಎಂದು ಕಾಲಿಂಗ್ ಬೆಲ್ ಶಬ್ದ.
“ಈಗ ಯಾರಪ್ಪ ಬೆಲ್ ಮಾಡುವರು?” ಎಂದು ಮೀರಾ ತನ್ನ ಪತಿ ಹರ್ಷ ನಿಗೆ ಕೇಳಿದಳು.
“ಸ್ವಲ್ಪ ಇರು,” ಎಂದು ಹೇಳಿ ಬಾಗಿಲು ತೆಗೆದ.
ಅವರ ಮನೆಗೆ ಆಕಸ್ಮಿಕವಾಗಿ ರಾಘವಪುರ್ ನಗರದ ಪ್ರತಿಷ್ಟಿತ ವ್ಯಕ್ತಿಗಳ ಆಗಮನ ವಾಯಿತು. ಅರ್ಧ ಗಂಟೆ ಇದ್ದು ಅವರು ಹೊರಟರು.
ಮೀರಾಗೆ ಕೋಪ ಬಂದು,
"ಇದೇನ್ರೀ, ಅವರಿಗೆ ಹೊತ್ತು ಗೊತ್ತು ಎನ್ನುವ ಪರಿಜ್ಞಾನ ಇಲ್ಲವೇ? ಇನ್ನೂ ಅರ್ಧ ಗಂಟೆಯಲ್ಲಿ ಊಟ ಮುಗಿಸಿ ನೀವು ಕೋರ್ಟ್ ಗೆ ನಿಮ್ಮ ಸಹಾಯಕಿ ಆದ ನಾನು ನಿಮಗೆ ಸಂಭಂದ ಪಟ್ಟ ಫೈಲ್ ಕೊಡುವದಲ್ದೇ ಬ್ರಿಫಿ0ಗ್ ಮಾಡಬೇಕು. ಇಂದು ಒಂದು ಮಹತ್ವ ವಾದ ಕೇಸ್ ಹಿಯರಿಂಗ್ ಇದೆ. ನಿಮ್ಮ ಮುಖ ನೋಡಿ ಪಾಪ ಅನಿಸಿ ನನಗೆ ಆಗಿರುವ ಸಿಟ್ಟು ತಡೆದುಕೊಂಡೆ.”
“ಇವರೆಲ್ಲ ಏಕೆ ಬಂದರು ಎನ್ನುವದು ನಿನಗೆ ಅರ್ಥ ವಾಗಿರ ಬಹುದು. ನಾನು ಈಗ ರಾಘವಪುರ್ ನಲ್ಲಿ ಲೀಡಿಂಗ್ ಅಡ್ವೋಕೇಟ್.”
“ಹೌದು ಹರ್ಷ ಅವರೇ, ನನ್ನದೊಂದು ಪ್ರಶ್ನೆ?”
“ಅದೇನು ಬೇಗ ಕೇಳು?”
“ನಿಮ್ಮ ವಕೀಲಿ ವೃತ್ತಿಯಲ್ಲಿ ಯಶಸ್ವಿ ಆಗುವದಕ್ಕೆ ಯಾರ ಕೊಡುಗೆ ಇದೆ ಹೇಳಿ?”
"ಯಶಸ್ವಿ ಪುರುಷನ ಹಿಂದೆ ಇರುವಳು ಒಬ್ಬ ಮಹಿಳೆ. ಆ ಮಹಿಳೆ ಬೇರೆ ಯಾರೂ ಅಲ್ಲ ನೀನು. ನಿನಗೆ ಎಷ್ಟು ಕೊಂಡಾಡಿದರೂ ಕಡಿಮೆ. ಆದರ್ಶ ಪತ್ನಿ ಎನ್ನುವ ಪ್ರಶಸ್ತಿ ಏನಾದರೂ ಇದ್ದರೆ ಅದಕ್ಕೆ ನೀನು ಅರ್ಹಳು,” ಎಂದ.
“ನಿಮ್ಮ ಹೊಗಳಿಕೆ ಸಾಕು. ಪತ್ನಿ ಧರ್ಮ ನಿಭಾಯಿಸಿದ್ದೇನೆ ಅಷ್ಟೇ.”
ಅವಸರದಲ್ಲಿ ಊಟ ಮುಗಿಸಿ ಇಬ್ಬರೂ ಹೊರಗೆ ನಡೆದರು.
ಬೆಂಗಳೂರು ಲಾ ಕಾಲೇಜ್ ನಲ್ಲಿ ಹರ್ಷ ಕಾನೂನು ಪದವಿ ಮುಗಿಸಿದಮೇಲೆ ಒಂದು ವರ್ಷ ಸೀನಿಯರ್ ಅಡ್ವೋಕೆಟ್ ಹತ್ತಿರ ಕೆಲಸ ಮುಗಿಸಿ ರಾಘವಪುರ್ ನಗರದಲ್ಲಿ ಪ್ರಾಕ್ಟೀಸ್ ಪ್ರಾರಂಭ ಮಾಡಿದ.
ಹರ್ಷ, ರಾಘವಪುರ್ ನಗರ ಏಕೆ ಆಯ್ಕೆ ಮಾಡಿದ?
ನಗರಕ್ಕೂ ಹರ್ಷ ನಿಗೂ ಅವಿನಾಭಾವ ಸಂಭಂದ. ರಾಘವಪುರ್ ಅವನ ತಾಯಿ ಹುಟ್ಟಿ ಬೆಳೆದ ಊರು. ಕೇವಲ ಐದು ವರ್ಷದ ಅವಧಿಯಲ್ಲಿ ಲೀಡಿಂಗ್ ಲಾಯರ್ ಎನ್ನುವ ಹೆಗ್ಗಳಿಕೆಗೆ ಪಾತ್ರ ನಾದ. ನೆನಗುದಿಗೆ ಬಿದ್ದಿರುವ ಎಷ್ಟೋ ಕೇಸ್ ಗಳನ್ನು ಇತ್ಯರ್ಥ ಮಾಡುವಲ್ಲಿ ಯಶಸ್ವಿ ಆದ. ಹರ್ಷನ ಜೊತೆಗೆ ಯಾವುದೇ ವಿಷಯದ ಮೇಲೆ ಚರ್ಚೆ ಮಾಡಿದರೆ ಅವರನ್ನು ಸೋಲಿಸುವದು ಕಷ್ಟ ಎಂದು ಅಲ್ಲಿಯ ಜನ ಹೇಳುತ್ತಿದ್ದರು.
ವಕೀಲಿ ವೃತ್ತಿ ಪ್ರಾರಂಭ ಮಾಡಿದ ಮೊದಲನೇ ವರ್ಷ. ಬೆಳಗಿನ ಹನ್ನೊಂದು ಗಂಟೆ ಸಮಯ. ಕೋರ್ಟ್ ಆವರಣದಲ್ಲಿ ಇರುವ ಕ್ಯಾಂಟೀನ್ ನಲ್ಲಿ ಹರ್ಷ ತನ್ನ ಇನ್ನೊಬ್ಬ ಲಾಯರ್ ಮಿತ್ರ ಜೊತೆಗೆ ಕಾಫಿ ಕುಡಿಯಲು ಬಂದ.
"ಗಿರೀಶ್,ಯಾಕೋ ನನಗೆ ಇಲ್ಲಿ ಇರುವ ಮನಸ್ಸು ಇಲ್ಲ. ಈ ಒಂದು ವರ್ಷದ ಅವಧಿಯಲ್ಲಿ ಒಂದು ಕೇಸು ಬಂದಿಲ್ಲ. ಮುಂದೆ ನನ್ನ ವಕೀಲ ವೃತ್ತಿ ಇಲ್ಲಿ ನಡೆಯುವದೋ ಅಥವಾ ಇಲ್ಲ. ಬೆಂಗಳೂರು ವಾಪಸ್ ಹೋಗಿ ಅಲ್ಲಿ ಒಂದು ಒಳ್ಳೇ ಕೆಲಸಕ್ಕೆ ಸೇರುವೆ," ಎಂದ.
“ಹರ್ಷ, ಇಷ್ಟು ಬೇಗ ನಿರಾಶೆ ಆದರೆ ಹೇಗೆ? ನೋಡು ನನ್ನ ಅವಸ್ಥೆ. ಎರಡು ವರ್ಷದ ಹಿಂದೆ ನಾನು ಲಾಯರ್. ಜನರು ನನಗೆ ಸಂಡೆ ಲಾಯರ್ ಅನ್ನುವರು. ಒಳ್ಳೇಯ ಸಮಯ ಬಂದೆ ಬರುತ್ತೆ,” ಎಂದ.
ಪಕ್ಕದ ಸೀಟ್ ಮೇಲೆ ಕುಳಿತ ಸುಮಾರು ಇಪ್ಪತ್ತೈದು ವರ್ಷದ ಸುಂದರ ಯುವತಿ ಎದುರಿಗೆ ಕುಳಿತ ಮಧ್ಯ ವಯಸ್ಸಿನ ಮಹಿಳೆ ಯ ಜೊತೆಗೆ ಹಾಸ್ಯದ ಮಾತುಗಳು ನಡೆದು ಅವರಬ್ಬರೂ ಜೋರಾಗಿ ನಗುತ್ತಿದ್ದರು.
“ಗಿರೀಶ್, ಆ ಯುವತಿ ಯಾರು?” ಎಂದು ಕೇಳಿದ.
“ಆಕೆ ಶಾಲಿನಿ. ವಿದ್ಯಾವರ್ಧಕ ಪ್ರಾಢಶಾಲೆ ಯಲ್ಲಿ ಶಿಕ್ಷಕಿ.”
“ಗಿರೀಶ್, ಶಾಲಿನಿ ಯ ಹಾಸ್ಯ ಭರಿತ ಮಾತುಗಳು ಹಾಗೂ ಅವಳ ರೂಪ, ಲಾವಣ್ಯ ನೋಡಿ ನನಗೆ ಆಕೆ ಮೇಲೆ ಅನುರಾಗ ಅಂಕುರ ವಾಗಿದೆ.”
ಗಿರೀಶ್ ನಿಗೆ ಕಸವಿಸಿ ಆಯಿತು. ಕಾರಣ ಆಕೆ ಬರುವ ತಿಂಗಳು ದಿನಾಂಕ ಐದಕ್ಕೆ ಅವನ ಜೊತೆಗೆ ಆಕೆ ಮದುವೆ ನಿಶ್ಚಿತಾರ್ಥ ಇದೆ. ಇದರ ಸಿದ್ಧತೆ ಭರದಿಂದ ಸಾಗಿದೆ. ಇದನ್ನು ಹೇಳ ಬೇಕೋ ಬೇಡವೋ ಎಂದು ವಿಚಾರಿಸಿದ.
“ಹರ್ಷ, ನನಗೆ ತಿಳಿದ ಮಾಹಿತಿ ಪ್ರಕಾರ ಆಕೆಯ ಮದುವೆ ನಿರ್ಧಾರ ವಾಗಿದೆ. ನೀನು ಬೇರೆ ಹುಡುಗಿಯನ್ನು ನೋಡು,” ಎಂದ.
ಒಂದು ತಿಂಗಳು ಕಳೆಯಿತು.
ಶಾಲಿನಿ ಮದುವೆ ಗಿರೀಶ್ ಜೊತೆಗೆ ನಿಶ್ಚಯ ಆಗಿದೆ ಎಂದು ಕೇಳಿದ ಹರ್ಷನಿಗೆ ತುಂಬಾ ಅಸಮಾಧಾನ ವಾಯಿತು. ಮನುಷ್ಯ ಆಸೆ ಪಡುವದು ಸಹಜ.
ಅಂದು ಗಿರೀಶ್ ಯಾಕೆ ಹೇಳಲಿಲ್ಲ?
ಮೊದಲ ನೋಟಕ್ಕೆ ಆ ಸುಂದರ ಯುವತಿಯನ್ನು ಪ್ರೀತಿಸಿ ತಪ್ಪು ಮಾಡಿದೆ ಎಂದು ಪರಿತಪಿಸಿದ. ಗಿರೀಶ್ ಒಳ್ಳೇಯ ಸ್ನೇಹಿತ. ಅದೇ ಊರಿನವನು. ಹರ್ಷನಿಗೆ ಇರಲು ಬಾಡಿಗೆ ಮನೆ ಹಾಗೂ ಅನೇಕ ಜನರ ಪರಿಚಯ ಮಾಡಿಸಿದ್ಧ. ಆಪ್ತನಾದ ಗಿರೀಶ್ ಹೀಗೆ ಮಾಡಬಾರದಾಗಿತ್ತು ಎಂದು ಅಂದುಕೊಂಡ.
ಆದರೆ ಮುಂದೆ ಆಗಿರುವದೇ ಬೇರೆ.
ಶಾಲಿನಿ ಹಾಗೂ ಗಿರೀಶ್ ಮದುವೆ ನಿಶ್ಚಿತಾರ್ಥವಾಗುವ ಮೂರು ದಿವಸ ಮೊದಲು ಶಾಲಿನಿ ಈ ಮದುವೆ ಬೇಡ ಎಂದಳು. ಕಾರಣ ಗಣಪತಿ ಬಡಾವಣೆ, ರಾಘವಪುರ್ ದಲ್ಲಿ ಹರಡಿದ ದಟ್ಟವಾದ ಸುದ್ದಿ.
ಅಂತಹ ಸುದ್ದಿ ಆದರೂ ಏನು?
ಗಿರೀಶ್ ನ ನಡತೆ, ಚಾರಿತ್ರೆ ಹಾಗೂ ಹದಗೆಟ್ಟ ಆರೋಗ್ಯ ತಿಳಿದ ಶಾಲಿನಿ ದಿಟ್ಟವಾದ ನಿರ್ಣಯ ತೆಗೆದು ಕೊಂಡಳು.
ಅದಾದ ನಂತರ ಗಿರೀಶ್ ಎಲ್ಲಿಗೆ ಹೋದ ಯಾರಿಗೂ ತಿಳಿದಿಲ್ಲ.
ಆಗತಾನೆ ಹರ್ಷ ವಕೀಲಿ ವೃತ್ತಿ ಯಲ್ಲಿ ಇದ್ದು ಎರಡು ವರ್ಷ ಆಗಿತ್ತು. ಒಂದು ದಿವಸ ಹರ್ಷ ನಿಗೆ ವಿದ್ಯಾ ವರ್ಧಕ ಪ್ರೌಢ ಶಾಲೆಯ ಹೆಡ್ ಮಾಸ್ಟರ್ ಶಂಭುನಾಥ್ ಅವರ ಕರೆ ಬಂದಿತು. ಬರುವ ಭಾನುವಾರ ದಿನಾಂಕ ಹತ್ತು ಶಾಲೆಯ ವಾರ್ಷಿಕೋತ್ಸವ. ಹರ್ಷನ ಸುಮಧುರ ಧ್ವನಿ ತಿಳಿದಿದ್ದ ಶಂಭುನಾಥ್ ಅವರು ಕಾರ್ಯಕ್ರಮ ದಲ್ಲಿ ಭಾಗವಹಿಸಲು ಕೇಳಿದರು. ಅದಕ್ಕೆ ಹರ್ಷ ಒಪ್ಪಿದ. ಅಂದಿನ ಕಾರ್ಯಕ್ರಮದ ಹರ್ಷನ ಅದ್ಭುತ ಹಾಡುಗಾರಿಕೆ ಆಲಿಸಿದ ಶಾಲಿನಿಗೆ ತುಂಬಾ ಮೆಚ್ಚುಗೆ ಆಗಿ ಅವನ ಪರಿಚಯ ಮಾಡಿಕೊಂಡಳು. ಮುಂದೆ ಅವರಿಬ್ಬರೂ ಪ್ರೇಮಿಗಳಾಗಿ ಮದುವೆ ಆದರು. ತನ್ನ ತಾಯಿಯ ಹೆಸರು ಶಾಲಿನಿ ಇರುವದರಿಂದ ಹರ್ಷ, ಪತ್ನಿ ಹೆಸರು ಮೀರಾ ಎಂದು ಬದಲಾಯಿಸಿದ. ಮುಂದೆ ಒಂದು ವರ್ಷ ಆದ ಮೇಲೆ ಶಾಲಿನಿ, ಶಿಕ್ಷಕ ಕೆಲಸಕ್ಕೆ ರಾಜೀನಾಮೆ ಕೊಟ್ಟು ಪತಿಗೆ ಆತನ ವೃತ್ತಿಯಲ್ಲಿ ಸಹಾಯಕ ಳಾದಳು.
ಸಮಯ ಸಿಕ್ಕಾಗ ಹಿಂದಿನ ಘಟನೆಗಳನ್ನು ದಂಪತಿಗಳು ಸ್ಮರಿಸಿಕೂಂಡು ಜೋರಾಗಿ ನಗುವರು.
ಅಂದು ಸಾಯಂಕಾಲ ಇಬ್ಬರೂ ಮನೆಗೆ ಆರು ಗಂಟೆಗೆ ಮನೆಗೆ ಬಂದರು. ಮೊದಲು ಟೀ ಕುಡಿದು ಆಮೇಲೆ ಬೆಳಗ್ಗೆ ಆದ ಅಪೂರ್ಣ ಸಂಭಾಷಣೆ ಮುಂದುವರೆಸಿದರು.
"ಮೀರಾ, ಬೆಳಗ್ಗೆ ಬಂದವರು ಗೌರವಾನ್ವಿತ ವ್ಯಕ್ತಿಗಳು. ನೀನು ಕೋಪ ಮಾಡಿ ಕೊಂಡಿ ರುವದರಿಂದ ನನಗೆ ತುಂಬಾ ಬೇಜಾರಾ. ಯಿತು."
"ಹರ್ಷ, ನಾನು ಇದೇ ಊರಿನಲ್ಲಿ ಹುಟ್ಟಿ ಬೆಳೆದವಳು. ಅವರೆಲ್ಲರ ಜಾತಕ ನನ್ನ ಹತ್ತಿರ ಇದೆ."
" ನೋಡು, ಅವರಲ್ಲಿ ಒಬ್ಬ ಲಾಯರ್, ಇನ್ನೊಬ್ಬ ಡಾಕ್ಟರ್, ಮತ್ತೊಬ್ಬ ನಿವೃತ್ತ ನ್ಯಾಯಾಧೀಶ. ನನ್ನ ಎದುರುಗಡೆ ಕುಳಿತ ಧೃಢಕಾಯ ವ್ಯಕ್ತಿ ಪುರಸಭೆ ಅಧ್ಯಕ್ಷ."
"ಅವರಲ್ಲಿ ನಿವೃತ್ತ ನ್ಯಾಯಾಧೀಶರನ್ನು ಬಿಟ್ಟು ಉಳಿದವರು ನಂಬಿಕೆಗೆ ಅನರ್ಹರು."
"ಯಾವುದನ್ನೂ ತಿಳಿದು ಮಾತಾಡಬೇಕು."
"ಅವರ ಚರಿತ್ರೆ ಬೇಕಾದರೆ ಕೇಳು."
"ನನಗೆ ಅದರ ಅವಶ್ಯಕತೆ ಇಲ್ಲ."
"ಆ ಲಾಯರ್ ಸುಳ್ಳಿನ ಪರ ನ್ಯಾಯಲಯದಲ್ಲಿ ವಾದಿಸಿ ಹಣ ಗಳಿಸಿದ. ಆ ಡಾಕ್ಟರ್ ಮಹಾಶಯ ಲೆಕ್ಕವಿಲ್ಲದಷ್ಟು ರೋಗಿಗಳನ್ನು ಪರಲೋಕಕ್ಕೆ ಕಳಿಸಿದ. ಇನ್ನೊಬ್ಬ ಧೃಢಕಾಯ ಪುರಸಭೆ ಅಧ್ಯಕ್ಷ ಲಂಚದ ಹಣ ದಿಂದ ಬಂಗಲೆ, ಕಾರು, ಮನೆ ತುಂಬಾ ಕೆಲಸದವರು ಮಾಡಿಕೊಂಡ. ಹತ್ತು ವರ್ಷದ ಹಿಂದೆ ಈ ಮಹಾಶಯ ಕೋರ್ಟ್ ಆವರಣದಲ್ಲಿ ಆಫೀಡವಿಟ್, ಕರಾರು ಪತ್ರಗಳನ್ನು ಟೈಪ್ ಮಾಡುತ್ತಿದ್ದ.”
"ಮೀರಾ, ನೀನು ತಿಳಿದು ಕೊಂಡ ಹಾಗೆ ಇಲ್ಲ. ಅವರೆಲ್ಲರೂ ಒಳ್ಳೇಯವರು."
ಆ ಕ್ಷಣ ಹರ್ಷನಿಗೆ ಗೆ ಮುಂದೆ ಮಾತನಾಡಲು ಆಗದೇ ಒಂದು ಕ್ಷಣ ಬಿಟ್ಟು ಮುಂದುವರೆಸಿದ.
"ಮೀರಾ,ಒಂದು ಮಾತು ನೆನಪಿನಲ್ಲಿ ಇಟ್ಟುಕೋ."
"ಅದೇನು ಹೇಳಿ?"
"ನಾವು ಯಾರ ಬಗ್ಗೆ ಮಾತನಾಡುವ ಮೊದಲು ಎಚ್ಚರದಿಂದ ಇರಬೇಕು."
ಅವರ ಹಾಸ್ಯಭರಿತ ಮಾತು ಹಾಗೆ ಮುಂದು ವರೆಯಿತು.
"ಯಾಕೆ ನನ್ನ ಮಾತಿಗೆ ಸಿಟ್ಟು ಬಂದಿತೇ?"
"ನೀನು ವಾಚಾಳಿ ಎಂದು ಮೊದಲು ನನಗೆ ತಿಳಿದಿದ್ದರೇ….?
"ತಿಳಿದಿದ್ದರೆ ನನ್ನ ಜೊತೆಗೆ ಮದುವೆ ಬೇಡ ಎನ್ನುತ್ತಿದ್ದಿರಾ? ಸ್ವಲ್ಪ ನಿಮ್ಮ ಬಗ್ಗೆ ಆತ್ಮಾ ವಲೋಕನ ಮಾಡಿಕೊಳ್ಳಿ. ನಿಮ್ಮನ್ನು ಮದುವೆ ಆಗಲು ಬಂದ ಹುಡುಗಿಯರನ್ನು ನೀವು ಏಕೆ ರಿಜೆಕ್ಟ ಮಾಡಿದಿರಿ? ಒಬ್ಬಳು ಕಪ್ಪು, ಇನ್ನೂಬ್ಬಳು ಮೆಳ್ಳಗಣ್ಣಿ, ಮತ್ತೊಬ್ಬಳು ಶೂರ್ಪನಖಿ, ಮುಗದೊಬ್ಬಳಿಗೆ ದಪ್ಪ ಕುಳ್ಳಿ ಎಂದಿರಿ. ನನ್ನಲ್ಲಿ ನಿಮಗೆ ಯಾವ ಆಕರ್ಷಣೆ ಕಾಣಿಸಿತು? ಅವರೆಲ್ಲರೂ ನಿನಗೆ ಏನು ಅಂದರು ಗೊತ್ತೇ?"
"ಅವರು ನನಗೆ ಏನು ಅಂದರು ಬೇಗ ಹೇಳು."
"ಕಪ್ಪು ಇರುವವಳು ನಿಮಗೆ ಅಸಡ್ಡೆ ಅಂದರೆ ಮೆಳ್ಳಗಣ್ಣಿನವಳು ನಿಮಗೆ ಅಷ್ಟಾವಕ್ರ ಅಂದರೆ ದಪ್ಪಗಿರುವವಳು ನೀವು ಕಿವುಡ ಅಂದಳು. ಇನ್ನೊ ಬ್ಬಳು ಏನು ಹೇಳಿದಳು ಅಂದರೆ ನೀವು ನನಗೆ ಡೈವೋರ್ಸ್ ಕೊಡುವಿರಿ. ಅದಕ್ಕೆ ಬೇಡ."
"ಮೀರಾ, ಅಂದು ನೀನು ಬ್ಯುಟಿ ಪಾರ್ಲರ್ ಗೆ ಹೋಗಿ ಸುಂದರವಾಗಿ ಕಾಣುವ ಹಾಗೆ ಮೇಕ್ ಅಪ್ ಮಾಡಿಕೊಂಡು ಬಂದೆ. ಆದರೆ ಈಗ ನಾನು ನಿನ್ನ ನಿಜವಾದ ಚಲುವಿಕೆ ನೋಡಿ ಮೋಸ ಹೋದೆ.”
"ಹರ್ಷ, ನಾನು ನಿನ್ನಲ್ಲಿ ಕಂಡದ್ದು ಏನು ಗೊತ್ತಾ?"
"ಏನು ಕಂಡಿದ್ದಿ?"
"ನಾನು ಕಿಲಾಡಿ ಇದ್ದರೆ ನೀನು ಮಹಾ ಕಿಲಾಡಿ. ನಾನು ತರಲೆ ಇದ್ದರೆ ನೀನು ಮಹಾ ತರಲೆ. ಇದಕ್ಕೆ ನಮ್ಮ ಮದುವೆ ಸಾಕ್ಷಿ.”
“ಹಾಗೇಕೆ ಅನ್ನುವಿ?”
ಇಂತಹ ಹಾಸ್ಯದ ಪ್ರಸಂಗಗಳು ಆಗಾಗಬಂದಾಗ ಇಬ್ಬರೂ ಬಿದ್ದು ಬಿದ್ದು ನಗುವರು.
"ಹರ್ಷ ನಾನು ವಾಚಾಳಿ ಅಷ್ಟೇ ಅಲ್ಲ, ಕಾಲು ಕೆದರಿ ಜಗಳ ತೆಗೆಯುವ ಜಗಳಗಂಟಿ."
"ನಾನೇನು ಕಡಿಮೆ ಇಲ್ಲ. ಆಫೀಸ್ ನಲ್ಲಿ ಜಗಳ, ಮನೆಯಲ್ಲೂ ಜಗಳ ಆಡುವವನು.
ಮತ್ತೆ ಇಬ್ಬರೂ ಜೋರಾಗಿ ನಕ್ಕರು.
ಸಮಯ ರಾತ್ರಿ 9 ಗಂಟೆ ಆಗಿರುವುದರಿಂದ ಅಡುಗೆ ಸಿದ್ದತೆ ಮಾಡಲು ಮೀರಾ ಕಿಚನ್ ಗೆ ಹೋದಳು.
"ಪತಿ ರಾಯರೇ, ಅರ್ಧ ಗಂಟೆ ಒಳಗೆ ಬರಬೇಡಿ. ಅಲ್ಲಿಯವರೆಗೆ ಮನೆ ಅಂಗಳದಲ್ಲಿ ಒಂದು ರೌಂಡ್ ಹೋಗಿ ಬನ್ನಿ."
ಹರ್ಷ ಹೊರಗೆ ಹೋಗಿ ಹತ್ತು ನಿಮಿಷ ಬಿಟ್ಟು ಬಂದ. ಅವನು ಒಳಗೆ ಬರುವದಕ್ಕೂ ಅಡುಗೆ ರೆಡಿ ಎಂದು ಪತ್ನಿ ಹೇಳುವದಕ್ಕೂ ಸರಿ ಆಯಿತು. ಊಟ ಮಾಡುವಾಗ ಮಾತನಾಡಬಾರದು ಎಂಬ ನಿಯಮ ಇರುವದರಿಂದ ಊಟ ಮುಗಿಯುವ ವರೆಗೆ ಮೌನ.
ಹರ್ಷನ ವೃತ್ತಿ ಜೀವನ ಬೆಳೆಯುತ್ತ ಹೋಯಿತು. ಯಶಸ್ವಿ ಪುರುಷನ ಹಿಂದೆ ಇರುವಳು ಮಹಿಳೆ ಎನ್ನುವದನ್ನು ಸಾಕಾರ ಮಾಡಿ ತೋರಿಸಿದಳು ಮೀರಾ.
J