This is what trinity means in Kannada Adventure Stories by Vaman Acharya books and stories PDF | ತ್ರಿಮೂರ್ತಿಗಳು ಎಂದರೆ ಹೀಗಿರಬೇಕು

Featured Books
Categories
Share

ತ್ರಿಮೂರ್ತಿಗಳು ಎಂದರೆ ಹೀಗಿರಬೇಕು

ತ್ರಿಮೂರ್ತಿಗಳು ಅಂದರೆ ಹೀಗಿರಬೇಕು

(ಮೂವರು ಸಹೋದ್ಯೋಗಿಗಳ ರೋಚಕ ಕತೆ)

ಲೇಖಕರು ವಾಮನ್ ಆಚಾರ್ಯ


ನವೀನ್, ಚಕ್ರಪಾಣಿ ಹಾಗೂ ರೋಹಿತ್, ಮೂವತ್ತರಿಂದ ಮೂವತ್ತೈದು ವರ್ಷ ಆಸುಪಾಸು ವಯಸ್ಸು ಇರುವ ಯುವಕರು ಇನ್ಫೋ ಇಂಟರ್ ನ್ಯಾಷನಲ್ ಕಂಪನಿಯ ಮಾರ್ಕೆಟಿಂಗ್ ಎಕ್ಸೆಕುಟಿವ್ಸ್. ಅಂದು ಇಡೀ ದಿವಸ ಬೆಂಗಳೂರು ನಗರದ 30 ಅಂತಸ್ತಿನ ಗಗನ ಚುಂಬಿ ಹೋಟೆಲ್ ಪ್ಯಾರ ಡೈಜ್ ಕಾಂನ್ಫ್ರೆನ್ಸ್ ಹಾಲ್ ನಲ್ಲಿ ವಿದೇಶಿ ಕಸ್ಟಮರ್ಸ್ ಜೊತೆಗೆ ಹಲವಾರು ಸುತ್ತು ಬಿಜನೆಸ್ ಪ್ರಮೋಷನ್ ಮೀಟಿಂಗ್ ಮಾಡಿ ಕೊನೆಗೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿಸುವಲ್ಲಿ ಯಶಸ್ವಿ ಆದರು.

ಅದಾದ ನಂತರ ವಿಶ್ರಾಂತಿ ತೆಗೆದು ಕೊಳ್ಳಲು ತಾವು ಬುಕ್ ಮಾಡಿದ ಅದೇ ಹೋಟೆಲ್ 15 ನೆ ಅಂತಸ್ತಿ ನಲ್ಲಿ ಇರುವ ರೂಮ್ ನಂಬರ್ 15007 ಕಡೆ ಹೋಗಲು ಲಿಫ್ಟ್ ಕಡೆ ಹೋದರು. ಮೂರು ಕಡೆ ಲಿಫ್ಟ್ ಇದ್ದರೂ ಎಲ್ಲವೂ ಕೆಟ್ಟು ಹೋದ ಕಾರಣ ಮೆಟ್ಟಲು ಹತ್ತಿ ಹೋಗುವ ಅನಿವಾರ್ಯತೆ ಬಂದಿತು. ಮೆಟ್ಟಲು ಹತ್ತುವದು ತುಂಬಾ ಶ್ರಮ. ಇದರಿಂದ ಏನು ಮಾಡಬೇಕು ಎನ್ನುವ ಚಿಂತೆಗೆ ಅವರು ಒಳಗಾದರು.

"ನವೀನ್, ಏನಾದರೂ ಪರ್ಯಾಯ ಮಾರ್ಗ ಇದೆಯಾ?" ಎಂದು ಕೇಳಿದ ರೋಹಿತ್.

"ನಾನು ಅದನ್ನೇ ವಿಚಾರ ಮಾಡುತ್ತಿದ್ದೇನೆ." ಎಂದ ನವೀನ್.

"ನೋಡಿ, ನಾವೆಲ್ಲರೂ ಯುವಕರು. ಮೆಟ್ಟಲು ಗಳನ್ನು ಹತ್ತಿ ಹೋಗೋಣ. ಲಿಫ್ಟ್ ರಿಪೇರಿ ಯಾವಾಗ ಮುಗಿಯುವದು ಗೊತ್ತಿಲ್ಲ,"ಎಂದ ಚಕ್ರಪಾಣಿ.

"ಮೆಟ್ಟಲು ಹತ್ತಿದರೆ ಅದಕ್ಕೆ ಬಹಳ ಸಮಯ ಹಾಗೂ ದೇಹಕ್ಕೆ ಶ್ರಮ ಕೂಡಾ ಆಗುವದು," ಎಂದ ನವೀನ್

"ನನ್ನದು ಒಂದು ಸಲಹೆ." ಎಂದ ರೋಹಿತ್.

"ಅದೇನಯ್ಯ ಬೇಗ ಹೇಳು?" ಇಬ್ಬರೂ ಒಂದೇ ಸಲ ಕೇಳಿದರು.

"ನನ್ನ ಸಲಹೆ ಒಪ್ಪಿದರೆ ಹದಿನೈದು ಅಂತಸ್ತು ವರೆಗೆ ಮೆಟ್ಟಲು ಹತ್ತಿದ ಮೇಲೆಯೂ ಯಾರಿಗೂ ಶ್ರಮ ಆಗುವದಿಲ್ಲ. ಅಲ್ಲದೆ ಮನಸ್ಸು ಪ್ರಫುಲ್ಲ ವಾಗುವದರ ಜೊತೆಗೆ ನಮ್ಮ ಜ್ಞಾನ ವೃದ್ಧಿ ಆಗುವದು."

"ಏ ರೋಹಿತ್ ನಿನ್ನ ಲೆಕ್ಚರ್ ಬೇಡ. ಏನು ಮಾಡಬೇಕು ಎನ್ನುವದನ್ನು ಬೇಗ ಹೇಳು."

" ನಾವು ಮೊದಲು ಹರಟೆ ಪ್ರಿಯರು. ಹರಟೆ ವಿಷಯ ಪ್ರಾರಂಭ ಆಗುವದು ಒಂದು ವಿಷಯದಮೇಲೆ ಮುಂದುವರೆದು ಎಲ್ಲೆಲ್ಲೋ ಹೋಗಿ ಬಿಡುತ್ತದೆ. ನನಗೆ ತಿಳಿದಿರುವಂತೆ ಹರಟೆ ಒಂದು ರೀತಿಯ ಮನರಂಜನೆ. ಹರಟೆ ಸದುಪಯೋಗ ಪಡಿಸಿ ಕೊಳ್ಳಬೇಕು. ಹಾಳು ಹರಟೆ ಕೈಯಲ್ಲಿ ಪರಟೆ ಆಗಬಾರದು. ಮೆಟ್ಟಲುಗಳನ್ನು ಏರುವಾಗ ಸಂಭಾಷಣೆಯಲ್ಲಿ ತೊಡಗಿದರೆ ಶ್ರಮ ಆಗುವದಿಲ್ಲ ಅಲ್ಲದೇ ಮೈ0ಡ್ ಆಕ್ಟಿವ್ ಆಗುವದು. ಈಗ ನಮಗೆ ಸಮಯದ ಒಂದು ಇತಿ ಮಿತಿ ಇಲ್ಲ. ಪ್ರಾರಂಭ ಮಾಡುವವರು ವಿಷಯ ಆಯ್ಕೆ ಮಾಡಬೇಕು. ಅದರ ಮೇಲೆ ಒಬ್ಬರಾದ ಇನ್ನೊಬ್ಬರು ಚರ್ಚೆ ಮುಂದುವರಿಸಬೇಕು. ಅದು ಹಾಗೆ ಮುಂದುವರೆ ಯುವದು. ನಮಗೆ ಕೆಲಸದ ಒತ್ತಡ ದಲ್ಲಿ ಇಂತಹ ಮಾತಾಡುವ ಸಮಯ ಸಿಗುವದಿಲ್ಲ. ಈಗಿನ ಹರಟೆಗೆ ಯಾವ ತರಹದ ನಿಯಮ ಗಳು, ನಿರ್ಭ0ದನೆ ಗಳು ಇಲ್ಲ. ಆದರೆ ಒಂದೇ ಒಂದು ನಿಯಮ. ಹದಿನೈದನೇ ಅಂತಸ್ತು ಬ0ದು ನಮ್ಮ ರೂಮ್ ತಲುಪಿದ ಮೇಲೆ ಮಾತು ನಿಲ್ಲಿಸಬೇಕು. ನಡು ನಡುವೆ ಒಂದು ಕಡೆ ಐದರಿಂದ ಹತ್ತು ನಿಮಿಷ ಬ್ರೇಕ್. ಆಗ ಒಂದು ಕಡೆ ಕುಳಿತು ತಿಂಡಿ ಜೊತೆಗೆ ಕೋಲ್ಡ್ ಡ್ರಿಂಕ್ಸ್ ತೆಗೆದುಕೊಂಡರೆ ಮತ್ತೆ ಉತ್ಸಾಹ ಬರುವದು, " ಎಂದ ರೋಹಿತ್.

ಅದಕ್ಕೆ ಉಳಿದ ಇಬ್ಬರೂ ಓಕೆ ಎಂದರು.

ಮೆಟ್ಟಲು ಹತ್ತುವ ಮೊದಲು ಕೋಕಾ ಕೋಲಾ, ವಾಟರ್ ಬಾಟಲ್, ಬಿಸ್ಕತ್ ಪ್ಯಾಕೆಟ್ ಗಳು, ಪಕೋಡ ಹಾಗೂ ಮಿಕ್ಷರ್ ಹೊರಗಿನಿಂದ ತಂದು ತಮ್ಮ ತಮ್ಮ ಬ್ಯಾಕ್ ಪ್ಯಾಕ್ ನಲ್ಲಿ ಇಟ್ಟು ಕೊಂಡರು. ಗೆಳೆಯರ ಮೆಟ್ಟಲು ಏರುವ ಸಹಾಸ ಆರಂಭ ಮಾಡುವ ಮೊದಲು ಕಣ್ಣು ಮುಚ್ಚಿ ದೇವರ ಪ್ರಾರ್ಥನೆ ಮಾಡಿ ಮೆಟ್ಟಲುಗಳ ಮೇಲೆ ಕಾಲು ಇಟ್ಟರು.

ಮಾತಾಡುವದು ಯಾರಿಂದ ಪ್ರಾರಂಭ? ಎನ್ನುವ ಪ್ರಶ್ನೆ ಉದ್ಭವ ವಾಯಿತು.

ರೋಹಿತ್ ಶುರು ಮಾಡಿದ.

"ಮಿತ್ರರೇ, ನನಗೆ ಒಂದು ವಿಷಯ ಬಹಳ ದಿವಸದಿಂದ ತಲೆಯಲ್ಲಿ ಇದೆ. ಕೆಲಸದ ಒತ್ತಡ ದಲ್ಲಿ ಹೇಳುವುದು ಆಗಲಿಲ್ಲ. ಸಧ್ಯ ಸಮಯ ಸಿಕ್ಕಿದೆ. ನಾವು ತ್ರಿಮೂರ್ತಿಗಳು ದೇಶದ ಬೇರೆ ಬೇರೆ ಭಾಗದಿಂದ ಬಂದವರು. ನಮ್ಮ ಭಾಷೆ, ಆಚಾರ, ವಿಚಾರ ಭಿನ್ನ ಇರುವದು ಸಹಜ. ಮೂರು ವರ್ಷ ಕರ್ನಾಟಕ ದಲ್ಲಿ ವಾಸ ಮಾಡುವದರಿಂದ ನಾವು ಈಗ ಕನ್ನಡದಲ್ಲಿ ನಿರರ್ಗಳವಾಗಿ ಮಾತಾಡುವದಕ್ಕೆ ಹಾಗೂ ಬರೆಯಲು ಬರುವದು. ಒಂದೇ ಕಂಪನಿಯಲ್ಲಿ ನಾವು ಅದೇ ಕೆಲಸಕ್ಕೆ ಸೇರಿರುವದು ಆಶ್ಚರ್ಯ. ನಮ್ಮಲ್ಲಿ ಒಂದಿಲ್ಲ ಒಂದು ಆಶ್ಚರ್ಯ ಇದೆ. ಅದನ್ನು ಈಗ ವ್ಯಕ್ತ ಪಡಿಸುವ ಸೂಕ್ತ ಸಮಯ. ನಾನು ಲಖ್ನೋ ಉತ್ತರ ಪ್ರದೇಶ ದಿಂದ ಬಂದರೆ, ನವೀನ್ ಮಧುರೈ, ತಮಿಳ್ ನಾಡು, ಚಕ್ರಪಾಣಿ ವಿಜಯವಾಡ ಆಂಧ್ರ ಪ್ರದೇಶ ದವನು. ನಾವು ಇಲ್ಲಿ ಕೂಡಿರುವದು ಯೋಗಾಯೋಗ ಅಲ್ಲದೇ ಮತ್ತೇನು? ನನ್ನ ತಂದೆ ಆಟೋ ಚಾಲಕ, ತಾಯಿ ಲೇಡೀಸ್ ಟೇಲರ್. ನನ್ನ ಇಂದಿನ ಸ್ಥಾನ ಮಾನಕ್ಕೆ ಭಗವಂತನ ಕೃಪೆ, ಮಾತಾಪಿತೃ ಗಳು ಹಾಗೂ ಗುರು ಹಿರಿಯರ ಆಶೀರ್ವಾದ."

"'ಮಿತ್ರರೇ, ನಾನು ವಿಜಯವಾಡ ಹತ್ತಿರ ಇರುವ ಕುಗ್ರಾಮದಲ್ಲಿ ಬಡ ರೈತನ ಮಗ. ತಾಯಿ ಕೃಷಿ ಭೂಮಿಯಲ್ಲಿ ಕೆಲಸ ಮಾಡಿದರೆ ಅಪ್ಪ ಗ್ರಾಮದ ಸಾಹುಕಾರ ಅವರ ಮನೆ ಯಲ್ಲಿ ಕೆಲಸ. ಸ್ಕೂಲ್, ಕಾಲೇಜ್ ಅಭ್ಯಾಸ ನಲ್ಲಿ ಹೈದರಾಬಾದ್ ನಲ್ಲಿ ಆಯಿತು. ನನ್ನ ಪ್ರತಿಭೆ ಆಧಾರ ದಮೇಲೆ ಸ್ಕಾಲರ್ ಶಿಪ್ ಸಿಕ್ಕು ಉತ್ತಮ ಶ್ರೇಣಿ ಯಲ್ಲಿ ತೇರ್ಗಡೆ ಆಗಿ ಒಳ್ಳೆಯ ಕೆಲಸ ಸಿಕ್ಕಿದೆ. ನಾವು ಪರಿಶ್ರಮ ಮಾಡಿದರೆ ನಿಶ್ಚಿತವಾಗಿ ಭಗವಂತನ ಕೃಪೆ ಸಿಗುವದು ಎನ್ನುವದು ನನ್ನ ಅಭಿಪ್ರಾಯ."

"ರೋಹಿತ್, ನವೀನ್ ನನ್ನದು ನಿಮಗಿಂತಲೂ ಸ್ವಲ್ಪ ಭಿನ್ನ. ನನಗೆ ಏಳು ವರ್ಷ ಇರುವಾಗ ತಂದೆಯನ್ನು ಕಳೆದುಕೊಂಡೆ. ತಾಯಿ ನನಗೆ ಓದಿಸಲು ತುಂಬಾ ಕಷ್ಟ ಪಟ್ಟಳು. ನನ್ನ ದೂರದ ಸಂಭಂದಿ ರಾಜಕೀಯ ನಾಯಕ. ನನ್ನಲ್ಲಿ ಇರುವ ಅದ್ಭುತ ನಾಲೆಜ್ ತಿಳಿದು ಕೊಂಡು ಕಾಲೇಜ್ ಶಿಕ್ಷಣ ಮುಂದುವರಿಸಲು ಎಲ್ಲಾ ರೀತಿಯ ಸಹಾಯ ಮಾಡಿದ. ಅವರ ಋಣ ನನ್ನ ಮೇಲೆ ಇದೆ." ಎಂದ ಚಕ್ರಪಾಣಿ.

ರೋಹಿತ್ ತನ್ನ ಮಾತು ಮುಂದುವರೆಸಿದ.

"ಬೆಂಗಳೂರು ಕಾಲೇಜ್ ಆಫ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಓದುವಾಗ ವಿಜಯನಗರ ದಲ್ಲಿ ಒಂದು ರೂಮ್ ಬಾಡಿಗೆ ಸಿಕ್ಕಿತು. ಆ ಮನೆ ಓನರ್ ವೃದ್ಧ ದಂಪತಿಗಳು. ಅವರ ಏಕೈಕ ಪುತ್ರ ನಿಗೆ ಜರ್ಮನಿ ಯಲ್ಲಿ ಕೆಲಸ. ವಿಶಾಲವಾದ ಮನೆಯಲ್ಲಿ ಇರುವವರು ಇಬ್ಬರೆ. ಆಗಾಗ ಹಿರಿಯ ದಂಪತಿಗಳಲ್ಲಿ ಜಗಳ ವಾಗುತ್ತಿತ್ತು. ಅವರು ನಿಜವಾಗಿ ಜಗಳ ವಾಡುತ್ತಿದ್ದರೋ ಇಲ್ಲ ಗೊತ್ತಿಲ್ಲ. ಅಜ್ಜ ನಿವೃತ್ತ ಕಾಲೇಜ್ ಪ್ರೊಫೆಸರ್ ಇದ್ದರೆ ಅಜ್ಜಿ ನಿವೃತ್ತ ಉನ್ನತ ಸರಕಾರಿ ಅಧಿಕಾರಿ. ದಿನಾಲು ಅಜ್ಜಿ, ಅಜ್ಜನಿಗೆ ಮಧ್ಯಾಹ್ನ ಊಟದ ಮೊದಲು ತೆಗೆದು ಕೊಳ್ಳುವ ಮಾತ್ರೆ ನೆನಪು ಕೊಡುವಳು. ಒಂದು ದಿವಸ ಆಕೆಗೆ ಹೇಳುವದು ಮರೆತು ಹೋಯಿತು. ಊಟ ಆದ ಮೇಲೆ ಅಜ್ಜನಿಗೆ ನೆನಪು ಬಂದು ಅಜ್ಜಿಗೆ ಹೀಗೇಕೆ ಮಾಡಿದೆ ಎಂದರು. ಅಂದು ಭಾನುವಾರ ನಾನು ರೂಮ್ ನಲ್ಲೆ ಇದ್ದೆ. ಒಂದು ತಿಂಗಳು ಆದಮೇಲೆ

ಬರುವ ಪರೀಕ್ಷೆ ಸಿದ್ಧತೆ ಮಾಡಲು ನೋಟ್ಸ್ ನೋಡುತ್ತಾ ಇದ್ದೆ. ಓದುವಾಗ ಅವರ ಜೋರಾದ ಮಾತು ಗಳು ಕೇಳಿ ನೋಟಬುಕ್ ಮುಚ್ಚಿ ನಾನು ಅಲ್ಲಿಗೆ ಹೋದೆ. ವಿಷಯ ತಿಳಿದಮೇಲೆ ಅಜ್ಜನಿಗೆ ಒಂದು ಸಲ ಮಾತ್ರೆ ಬಿಟ್ಟರೆ ಎನೂ ಆಗುವದಿಲ್ಲ ಎಂದು ಸಮಾಧಾನ ಪಡಿಸಿದೆ. ಅದಕ್ಕೆ ಅಜ್ಜ, 'ನೀನೇನು ಡಾಕ್ಟರ್ ಇದ್ದಿಯಾ? ಎಂದರು ಸಿಟ್ಟಿನಿಂದ.

'ಅಜ್ಜ, ನಾನು ಡಾಕ್ಟರ್ ಅಲ್ಲ. ಒಂದು ಸಲ ನನ್ನ ತಾಯಿಗೆ ಒಂದು ಡೋಜ್ ತೆಗೆದುಕೊಳ್ಳುವದು ಮರೆತು ಹೋಯಿತು. ಅಲ್ಲಿಯೇ ಇದ್ದ ನನ್ನ ಅಣ್ಣ ಡಾಕ್ಟರ್ ಏನೂ ಆಗುವದಿಲ್ಲ ಎಂದು ಹೇಳಿದ್ದು ನೆನಪು ಬಂತು ಅಷ್ಟೇ' ಎಂದೆ. ಬೇಗನೆ ಅವರು ಒಪ್ಪಿಕೊಳ್ಳಲಿಲ್ಲ. ನಂತರ ಅಜ್ಜ ಆಯಿತು ಎಂದರು. ಅಜ್ಜಿ ಮುಖದಮೇಲೆ ಮಂದಹಾಸ."

ಮಾತ್ರೆ ಎಂದ ಕೂಡಲೇ ನವೀನ್,

"ನಮ್ಮ ಊರು ನವಿಲೂರು ಒಂದು ಪುಟ್ಟ ಗ್ರಾಮ. ಆಗ ನಾನು ಪಿ ಯು ಸಿ ಎರಡನೇ ವರ್ಷದಲ್ಲಿ ಅಧ್ಯಯನ. ರಜೆಯಲ್ಲಿ ಹಳ್ಳಿಗೆ ಬಂದಿದ್ದೆ. ನನ್ನ ತಾಯಿಗೆ ಮಧುಮೇಹ ಇರುವದರಿಂದ ಸಮಯಕ್ಕೆ ಸರಿಯಾಗಿ ಮಾತ್ರೆ ತೆಗೆದುಕೊಳ್ಳಬೇಕು. ರಾತ್ರಿ ಎಂಟು ಗಂಟೆಗೆ ಮಾತ್ರೆ ಮುಗಿದಿವೆ. ರಾತ್ರಿ ಡೋಜ್ ಏನು ಮಾಡಲಿ ಎಂದಳು. ಮೆಡಿಕಲ್ ಸ್ಟೋರ್ ಇರುವದು ಹತ್ತು ಕಿಲೋಮೀಟರ್ ದೂರ ಇರುವ ರಾಘವಪುರ್ ದಲ್ಲಿ. ಮನೆಯಲ್ಲಿ ಇರುವ ಹಳೆಯ ಸ್ಕೂಟರ್ ಮೇಲೆ ರಾಘವಪುರ್ ಕ್ಕೆ ಹೋಗಲು ರೆಡಿ ಆದೆ. ಅಪ್ಪ ಅಮ್ಮ ಬೇಡ ಎಂದರೂ ಹೊರಟೆ ಬಿಟ್ಟೆ. ದಾರಿಯಲ್ಲಿ ಧಾರಾಕಾರ ಮಳೆ. ಅಲ್ಲಿ ನಿಲ್ಲಲು ಏನೂ ಆಸರೆ ಇಲ್ಲ. ಹಾಗೆ ಹೋಗಿ ಮಾತ್ರೆ ತೆಗೆದುಕೊಂಡು ಕೊಂಡು ವಾಪಸ್ ಊರಿಗೆ ಬಂದಾಗ ರಾತ್ರಿ ಹತ್ತು ಗಂಟೆ. ಅಮ್ಮನಿಗೆ ಸಮಾಧಾನ ವಾಯಿತು. ಇಬ್ಬರೂ ಊಟಮಾಡದೆ ನನ್ನ ದಾರಿ ಕಾಯುತ್ತಿದ್ದರು. ನನಗೆ ಮರುದಿವಸ ಛಳಿ ಜ್ವರ. ಸುಧಾರಿಸಲು ಒಂದು ವಾರ ಹಿಡಿಯಿತು."

ಚಕ್ರಪಾಣಿ ಗೆ ತನ್ನ ಅಪ್ಪನಿಗೆ ಹುಷಾರು ಇಲ್ಲದಾಗ ಡಾಕ್ಟರ್ ಜೊತೆಗೆ ಆದ ಕಟು ಅನುಭವ ನೆನಪು ಬಂದಿತು.

"ಸುಮಾರು ಐದು ವರ್ಷದ ಹಿಂದೆ ನಾನು

ಎಮ್ ಬಿ ಎ ಮೊದಲನೇ ವರ್ಷದಲ್ಲಿ ಇರುವಾಗ ನಡೆದ ಘಟನೆ. ಆಗ ನಾನು ಕಾಲೇಜ್ ಹಾಸ್ಟೆಲ್ ನಲ್ಲಿ ಇದ್ದೆ. ಬೆಳಗ್ಗೆ ಎಂಟು ಗಂಟೆಗೆ ಅಪ್ಪ ನಿಂದ ಮೊಬೈಲ್ ಕರೆ ಬಂದಿತು. ನಮ್ಮ ಊರು ಬೆಂಗಳೂರು ಸಿಟಿ ಯಿಂದ ಮೂವತ್ತು ಕಿಲೋಮೀಟರು ದೂರ ಇರುವ ಸೋಮನೂರು ಗ್ರಾಮ. ನಾನು ಬಡ ರೈತ ಕುಟುಂಬದಿಂದ ಬಂದವನು. ಅಪ್ಪ ನ ಆರೋಗ್ಯ ಸರಿ ಇಲ್ಲ ಎಂದು ಬೆಂಗಳೂರು ಸುಶಾಂತ್ ಆಸ್ಪತ್ರೆ ಯಲ್ಲಿ ಡಾ. ಸುರೇಶ್ ಅವರಿಗೆ ತೋರಿಸಲು ಬರುವದಾಗಿ ಹೇಳಿದರು. ತೋರಿಸುವದು ಆದಮೇಲೆ ಕರೆ ಮಾಡುವೆ ಆಗ ಬಾ ಎಂದರು. ಅವರ ಕರೆಗಾಗಿ ದಾರಿ ಕಾಯುತ್ತಿದ್ದೆ. ಅಪ್ಪನಿಂದ ಕರೆ ಬಂದಿತು. ಅಲ್ಲಿ ಆಗಿರುವದನ್ನು ತಿಳಿಸಿದರು. ಡಾಕ್ಟರ್ ಅವರ ಆರೋಗ್ಯ ತಪಾಸಣೆ ಮಾಡಿ ಮಾತ್ರೆಗಳನ್ನು ಬರೆದು ಕೊಟ್ಟರು. ಡಾಕ್ಟರ್ ಸಹಾಯಕ ಫೀಸ್ ರೂಪಾಯಿಮೂರು ನೂರು ಕೊಡಬೇಕು ಎಂದ. ಅಪ್ಪನ ಹತ್ತಿರ ಇರುವದು ಕೇವಲ ರೂಪಾಯಿ ಎರಡು ನೂರು. ಅದರಲ್ಲೇ ಮಾತ್ರೆ ಖರ್ಚು, ಊರಿಗೆ ವಾಪಸ್ ಹೋಗಲು ಬಸ್ ಚಾರ್ಜ್ ಬೇಕು. ಅಷ್ಟು ಹಣ ಇಲ್ಲ ಎಂದು ಅಪ್ಪ ಹೇಳಿದ. ಅಂದು ಆಸ್ಪತ್ರೆಯಲ್ಲಿ ರೋಗಿಗಳು ಬಹಳ ಇರುವದರಿಂದ ಅಪ್ಪನಿಗೆ ಬೆಂಚ್ ಮೇಲೆ ಕೂಡಿಸಿದರು. ಎಲ್ಲಾ ರೋಗಿಗಳು ಹೋದಮೇಲೆ ಅಂದರೆ ಒಂದು ಗಂಟೆ ನಂತರ ಡಾಕ್ಟರ್, ಅಪ್ಪನಿಗೆ ಒಳಗೆ ಕರೆದು ಫೀಸ್ ಕೊಡಲೇಬೇಕು ಎಂದರು. ಡಾಕ್ಟರ್ ಗೆ ಬಡವರ ಮೇಲೆ ಕರುಣೆ ಬೇಡವೇ? ಅಪ್ಪನ ಪರುಸ್ಥಿತಿ ನೋಡಿ ಕರುಣೆ ತೋರಿಸ ಬಹುದಾಗಿತ್ತು. ಹಾಗೆ ಮಾಡಲಿಲ್ಲ. ನಾನು ಹಾಸ್ಟೆಲ್ ರೂಮ್ ಮೆಟ್ ನಿಂದ ಎರಡು ನೂರು ರೂಪಾಯಿ ಹಣ ಸಾಲ ತೆಗೆದುಕೊಂಡು ಅಪ್ಪ ಇರುವ ಆಸ್ಪತ್ರೆ ಗೆ ಹೋಗುವದಕ್ಕೆ ಅರ್ಧ ಗಂಟೆ ಆಯಿತು. ಫೀಸ್ ಕೊಟ್ಟು ಮಾತ್ರೆ ಕೊಡಿಸಿ ನಂತರ ಅಪ್ಪನಿಗೆ ಬಸ್ ನಲ್ಲಿ ಕೂಡಿಸಿ ಹಾಸ್ಟೆಲ್ ಗೆ ವಾಪಸ್ ಬಂದೆ."

ಪ್ರತಿ ಐದು ಅಂತಸ್ತಿಗೆ ಮಿತ್ರರು ತಾವು ತಂದ ಪಾನೀಯ, ಫಲಹಾರ ತೆಗೆದುಕೊಳ್ಳುವದನ್ನು, ವಿಶ್ರಾಂತಿ ತೆಗೆದುಕೊಳ್ಳುವ ದನ್ನು ಮರೆಯಲಿಲ್ಲ.

ಇಷ್ಟೆಲ್ಲಾ ಮಾತುಗಳು ಆಗುವದಕ್ಕೆ ಹದಿನೈದನೇ ಅಂತಸ್ತು ತಮ್ಮ ರೂಮ್ ಗೆ ಬಂದರು. ಬಾಗಿಲು ತೆಗೆಯಲು ಜೇಬಿನಲ್ಲಿ ಕೈ ಹಾಕಿದ ಚಕ್ರಪಾಣಿ ಗಾಬರಿ ಆದ.

"ಏ ಚಕ್ರಪಾಣಿ, ಬೇಗನೆ ಡೋರ್ ಓಪನ್ ಮಾಡು. ಹಾಯಾಗಿ ಬೆಡ್ ಮೇಲೆ ಮಲಗಬೇಕು," ಎಂದ ರೋಹಿತ್.

"ಕ್ಷಮಿಸಿ ಸ್ನೇಹಿತರೆ, ಡೋರ್ ಕೀ ಕಾರ್ ನಲ್ಲಿ ಇದೆ," ಎಂದ ಚಕ್ರಪಾಣಿ.

ಎಲ್ಲರೂ ಸುಸ್ತಾಗಿ ನೆಲದ ಮೇಲೆ ಕುಸಿದು ಬಿದ್ದರು. ಒಬ್ಬನು ಗೋಡೆಗೆ ಹತ್ತಿ ಕುಳಿತರೆ ಇನ್ನೊಬ್ಬ ನೆಲದ ಮೇಲೆ ಮಲಗಿದ. ಮತ್ತೊಬ್ಬ ಅಲ್ಲಿಯೇ ಇರುವ ಬೆಂಚ್ ಮೇಲೆ ಮಲಗಿದ. ಸ್ವಲ್ಪ ಸಮಯ ಆದಮೇಲೆ ರೂಮ್ ಅಟೆಂಡರ್ ಬಂದು ತ್ರಿಮೂರ್ತಿಗಳ ಅವಸ್ಥೆ ನೋಡಿ ಗಾಬರಿ ಆಗಿ ಹೋಟೆಲ್ ಮ್ಯಾನೇಜರ್ ಗೆ ಕಾಲ ಮಾಡಿ ಆಗಿರುವದನ್ನು ವಿವರಿಸಿದ. ಅವರು ಹೋಟೆಲ್ ಕಾಂಪ್ಲೆಕ್ಸ್ ನಲ್ಲಿ ಇರುವ ಡಾಕ್ಟರ್ ಕರೆದುಕೊಂಡು ಬಂದರು. ಎಲ್ಲರೂ ಪರ್ಫೆಕ್ಟ್ಲಿ ಆಲ್ ರೈಟ್. ಮೆಟ್ಟಲುಗಳು ಹತ್ತಿ ಬಂದಿರುವದರಿಂದ ಆಯಾಸ ಆಗಿದೆ ಅಷ್ಟೇ ಎಂದರು ಡಾಕ್ಟರ್. ತ್ರಿಮೂರ್ತಿಗಳು ಎದ್ದು ಕುಳಿತರು. ಡಾಕ್ಟರ್ ಗೆ ಥ್ಯಾಂಕ್ಸ್ ಎಂದರು. ಆಗಲೇ ಲಿಫ್ಟ್ ಸರಿ ಆಯಿತು. ಚಕ್ರಪಾಣಿ ಕೀ ತರಲು ಕೆಳಗೆ ಹೋಗಿ ಐದು ನಿಮಿಷ ದಲ್ಲಿ ಬಂದ.

ಎಲ್ಲರೂ ರೂಮಲ್ಲಿ ಹೋಗಿ ಮಲಗಿ ಕೊಂಡವರು ಮರುದಿವಸ ಬೆಳಗ್ಗೆ ಎಂಟು ಗಂಟೆಗೆ ಎಚ್ಚರ.

ತ್ರಿಮೂರ್ತಿಗಳು ಆಫೀಸ್ ಕೆಲಸವಾಗಲಿ ಎಂಥದೆ ಕಠಿಣ ಸಮಸ್ಯ ಆಗಲಿ ಧೈರ್ಯದಿಂದ ಎದುರಿಸಿ ಎಲ್ಲರಿಂದ ಭೇಷ್ ಅನಿಸಿ ಕೊಂಡರು.