PACCHENAGARI - 2 in Kannada Love Stories by MANGALA books and stories PDF | ಪಚ್ಚೇನಗರಿ - 2

The Author
Featured Books
  • उजाले की ओर –संस्मरण

    मनुष्य का स्वभाव है कि वह सोचता बहुत है। सोचना गलत नहीं है ल...

  • You Are My Choice - 40

    आकाश श्रेया के बेड के पास एक डेस्क पे बैठा। "यू शुड रेस्ट। ह...

  • True Love

    Hello everyone this is a short story so, please give me rati...

  • मुक्त - भाग 3

    --------मुक्त -----(3)        खुशक हवा का चलना शुरू था... आज...

  • Krick और Nakchadi - 1

    ये एक ऐसी प्रेम कहानी है जो साथ, समर्पण और त्याग की मसाल काय...

Categories
Share

ಪಚ್ಚೇನಗರಿ - 2

ಮೆಲ್ಲಗೆ ಗುಲಾಬಿ ಹಿಡಿದ ಕೈ ಗೀತಾಳ ಕೈ ತಾಕಿ ಮೇಲೆತ್ತಲು ಪ್ರಯತ್ನಿಸಿತು. ಗೀತಾ ಮುಂದೆ ಇದ್ದ ಪೂರ್ಣ ಮುಖವನ್ನು ನೋಡತೊಡಗಿದಳು.


ಯಾರಿದು!
ಗೀತಾ : ಯಾರು ನೀವು?
ಮುಂದಿದ್ದ ಮುಖ : ಸಂದೀಪ್ ನನ್ ಹೆಸರು ಸಂದೀಪ್ ಅಂತ.
ಗೀತಾ : ಯಾಕೆ ನಂಗೆ ಇಷ್ಟು ಹೆದರಿಸಿದ್ರಿ, ಏನಿದು ಕೈನಲ್ಲಿ ಹೂವು! ಯಾಕೆ ನನ್ ಫಾಲೋ ಮಾಡಿದ್ರಿ? ನಂಗೆ ತುಂಬಾ ಭಯ ಆಯ್ತು.
ಹೀಗೇನಾ ಹೆದರಿಸೋದು?
ಸಂದೀಪ್ : ಸಾರಿ!
(ಗೀತಾ ನಿಶ್ಯಬ್ದ)
ಸಂದೀಪ್ : ಈ ಗುಲಾಬಿ ನಿಮಗಾಗಿ! ಇದನ್ನ ಕೊಡೋಕೆ ನಾನು
ಓಡೋಡಿ ಬಂದಿದ್ದು.
ಪ್ಲೀಸ್ ತಗೊಳ್ಳಿ!
ಗೀತಾ : ಯಾಕೆ ಈ ಗುಲಾಬಿ? ನನಗೆ ಬೇಡ. ಮಳೆ ತುಂಬಾ ಬಾರೋ ಹಾಗಿದೆ. ನಾನು ಹೊರಡಬೇಕು. ಬೈ.
ಸಂದೀಪ್ : ಗೀತಾ....ಪ್ಲೀಸ್...ನಿಂತುಕೊಳ್ಳಿ. ಪ್ಲೀಸ್...
(ಗೀತಾ ಏನು ಮಾತಾಡದೆ ತನ್ನ ಮನೆ ಕಡೆ ಹೊರಟಳು)
ಸಂದೀಪ್ ಕಣ್ಣುಗಳು ಮಾತ್ರ ಗೀತಾ ಮರೆಯಾಗುವ ವರೆಗೂ ನೋಡುತ್ತಿದ್ದವು.


(ಗೀತಾ ಮನೆ)

ಗೀತಾಳ ಅಮ್ಮ: ಗೀತಾ ಅನ್ನ ಇದೆ ಮಜ್ಜಿಗೆ ಇದೆ ಹಾಕೊಂಡು ತಿನ್ನು.
(ಗೀತಾ ಊಟ ತಿನ್ನುತ್ತ ಯೋಚಿಸತೊಡಗಿದಳು).
ಈತನನ್ನ ಎಲ್ಲೋ ನೋಡಿದ್ದೀನಿ ಆದ್ರೆ ಎಲ್ಲಿ ಅಂತ ಗೊತ್ತಾಗ್ತಿಲ್ಲ ಎಷ್ಟು ಜ್ಞಾಪಕ ಮಾಡ್ಕೊಂಡ್ರು ಗೊತ್ತಾಗ್ತಿಲ್ಲ ಆದರೆ ಮುಖ ಮಾತ್ರ ತುಂಬಾ ಪರಿಚಯ ಇದೆ ಅನ್ನಿಸ್ತಾ ಇದೆ ಯಾರು ಈ ಸಂದೀಪ್? ಜಾಸ್ತಿ ಯೋಚ್ನೆ ಮಾಡೋದ್ ಬೇಡ ನೋಡೋಣ

ಗೀತಾಳ ಅಮ್ಮ: ಊಟ ಮಾಡಿದ್ಯಾ ಇಲ್ವಾ?

ಗೀತಾ: ಆಯ್ತಮ್ಮ ತಿಂತಾ ಇದೀನಿ ಯಾಕೆ ಎಲ್ಲದಕ್ಕೂ ಕಿರಿಕಿರಿ ಮಾಡ್ತೀಯಾ ಅಪ್ಪ ಇನ್ನೂ ಬಂದಿಲ್ವಾ?

ಗೀತಾಳ ಅಮ್ಮ: ಇನ್ನು ಬಂದಿಲ್ಲ...

ಗೀತಾ: ಸರಿ ಹಾಗಾದ್ರೆ ನಾನು ರಾಧಾಮನೆಗೆ ಹೋಗಿ ಬರ್ತೀನಿ ಅಪ್ಪ ಬರೋ ಅಷ್ಟೊತ್ತಿಗೆ ಬಂದು ಮನೆ ಸೇರಿಕೊಳ್ತೀನಿ ಓಕೆನಾ...

ಗೀತಾಳ ಅಮ್ಮ: ಮಾಡೋಕೆ ಕೆಲಸ ಏನು ಇಲ್ವಾ ಮನೆಯಲ್ಲಿ ಇರು ಅಪ್ಪ ಸರಿ ಇಲ್ಲ ಬಂದ್ರೆ ಬೈತಾರೆ.

ಗೀತಾ : ಬೇಗ ಬಂದು ಬಿಡ್ತೀನಿ ಅಮ್ಮ....
( ಗೀತಾ ರಾಧಾಳ ಮನೆ ಕಡೆ ಹೊರಟಳು)

ರಾಧಾಳ ಮನೆ
ಗೀತಾ: ರಾದ ಏನ್ ಮಾಡ್ತಾ ಇದ್ದೀಯಾ.

ರಾಧಾ: ಏನ್ ಮಾಡ್ಲಿ ಬಾ ..
ಗೀತಾ : ನಿನ್ ಹತ್ರ ಏನೋ ಹೇಳ್ಬೇಕು...ಈವತ್ತು ಏನ್ ಆಯ್ತು ಗೊತ್ತಾ...ಒಬ್ಬ ಹುಡುಗ ನಂಗೆ ಪ್ರೊಪೋಸ್ ಮಾಡಿದ ನಾನು ರಿಜೆಕ್ಟ್ ಮಾಡಿ ಬಂದೆ ...ಒಳ್ಳೆ ಮೂವೀ ನಲ್ಲಿ ಆಗೊತರ ಸೀನ್ ಕ್ರಿಯೇಟ್ ಆಯ್ತು ಕಣೆ.
ರಾಧಾ : ಹೌದಾ ಎಲ್ಲಿ? ಯಾರು? ನಮ್ ಕಾಲೇಜ್ ಹುಡುಗನ ನಮ್ ಕ್ಲಾಸಾ ? ಯಾರು ? ಬೇಗ ಹೇಳು
ಗೀತಾ : ನಮ್ ಕಾಲೇಜ್ ಅಲ್ಲ ಅನ್ಸುತ್ತೆ ನನ್ ನೋಡೆ ಇಲ್ಲ..
ನಮ್ ಸೀನಿಯರ್ ಅಂತೂ ಅಲ್ಲ..ಆದ್ರೆ ಅವ್ನ ಫೇಸ್ ಎಲ್ಲೋ ನೋಡಿದೀನಿ ..
ಸಂದೀಪ್ ಅಂತ ಅವ್ನ ಹೆಸರು...ನಿಂಗೆನದ್ರು ಗೊತ್ತಾ...ಆ ಹೆಸರಿನವರು. ನಮ್ ಊರಿನಲ್ಲಂತು ಇಲ್ಲ ಯಾರು...
ರಾಧಾ : ಹೌದು ಸಂದೀಪ್ ಅಂತ ಯಾರಿದ್ದಾರೆ ...ಯಾರು ಇಲ್ಲ ..ಸರಿ ಏನಾಯಿತು ಹೇಳು ಹೆಂಗೆ ಪ್ರೊಪೋಸ್ ಮಾಡಿದ ಎಲ್ಲಿ..

(ಗೀತಾ ನಡೆದ ಘಟನೆ ವಿವರಿಸಿದಳು)

ರಾಧಾ : ಅಬ್ಬಾ! ಒಬ್ಬಳೇ ಇದ್ದೆ ಬೇರೆ ಯಾರೋ ಅವ್ನು...ಒಳ್ಳೇದಾಯ್ತು ಬಿಡು ನೀನು ಸುಮ್ನೆ ಬಂದಿದ್ದು. ಇಲ್ಲ ಅಂದಿದ್ರೆ ಏನ್ ಆಗ್ತಾ ಇತ್ತೋ...


ಗೀತಾ : ನನಗೇನೋ ಅವ್ನು ಅಷ್ಟೊಂದು ಕ್ರಿಮಿನಲ್ ಅನ್ನಿಸಲ್ಲಿಲ ತುಂಬಾ ಇನ್ನೋಸೆಂಟ್ ಅನ್ನಿಸ್ತು...ಆದ್ರೂ ಖುಷಿ ಆಯ್ತು....ಈ ಹುಡುಗರು ನಮ್ಮ ಹಿಂದೆ ಬಂದರೆ ಅದ್ರಲ್ಲಿ ಸಿಗೋ ಖುಶಿನೆ ಬೇರೆ...
ಚೆನ್ನಾಗಿತ್ತು ಒಂಥರಾ..


ರಾಧಾ : ಹುಷಾರು ಕಣೆ... ಎಲ್ಲ ಒಳ್ಳೆಯವರೇ ಇರೋಲ್ಲ

ಗೀತಾ : ಹ್ಮ್..
ರಾಧಾ : ಸರಿ ಮುಂದೆ ಏನ್ ಮಾಡ್ಬೇಕು ಅಂತ ಇದಿಯ...
ಅವ್ನು ಮತ್ತೆ ಬಂದ್ರೆ...
ಗೀತಾ. : ನೋಡೋಣ...( ಚಿಕ್ಕದಾದ ಸ್ಮೈಲ್ ಮಾಡಿ ಖುಷಿ ಪಟ್ಟಳು ಗೀತಾ)


ಮರುದಿನ ಕಾಲೇಜ್ ನಲ್ಲಿ...

ಗೀತಾ : ರಾಧಾ ಈವತ್ತು ಕ್ಲಾಸ್ ಬೇಗ ಬಿಡ್ತು ಅಲ್ವಾ .. ಟೈಂ ಪಾಸ್ ಆಗಿದ್ದೆ ಗೊತ್ತಾಗಿಲ್ಲ..
ರಾಧಾ : ಹ್ಮಂ...ನೀನು ಯಾವಾಗ್ಲೂ ಒಂದು ಮೂಡ್ ನಲ್ಲೆ ಇರ್ತಿಯ.. ನನ್ ತಲೆಗಂತು ಏನು ಹೋಗಿಲ್ಲ ಆ ಶ್ರೀದೇವಿ ಮೇಡಂ ಸಾರಿ, ಒಡವೆ ಸ್ಟೈಲ್ ಇದೆ ನೋಡ್ತಾ ಇದ್ದೆ ..ಅಕೌಂಟ್ಸ್ ತಲೆಗೆ ಹೋಗ್ಲಿಲ್ಲ...
ಗೀತಾ : ಹಿಂಗಾದ್ರೆಅಷ್ಟೇ....ಎಕ್ಸಾಮ್ ಪಾಸ್ ಅದಂಗೆ..

ರಾಧಾ : ಬಿಡೆ ನೆಕ್ಸ್ಟ್ ಇಯರ್ ಮದ್ವೆ ಆಗ್ತೀನಿ...ಓದಿ ಏನ್ ಮಾಡ್ಬೇಕು....ಎಬಿಸಿಡಿ ಹೇಳಿಕೊಡಬೇಕು ಅಷ್ಟು ಬರುತ್ತೆ...ಹ ಹ ಹ

ಗೀತಾ : ಹೆಣ್ಣುಮಕ್ಕಳು ಸ್ವಾವಲಂಬಿಗಳಗಿರ್ಬೇಕು..ಯಾರ್ ಮೇಲೂ ಡಿಪೆಂಡ್ ಆಗಬಾರದು ..ನಿಂಗೆ ತಲೆ ಇಲ್ಲ...ಮದ್ವೆ ಆದ್ರೆ ಅವ್ನು ಹೇಳ್ದಂಗೆ ನೀನು ಕೇಳ್ಬೇಕು ...ಏನ್ ಒಂದು ತಗೋಬೇಕು ಅಂದ್ರು ಗಂಡನನ್ನೇ ದುಡ್ಡು ಕೇಳ್ಬೇಕು..
ಇದೆಲ್ಲ ಓಕೆನ ನಿಂಗೆ...

ರಾಧಾ : 100% ಓಕೆ ನಂಗೆ. ..ಯಾಕಂದ್ರೆ ನಂಗೆ ಗೊತ್ತು ಗಂಡನ್ನ ಹೆಂಗೆ ಹದ್ದುಬಸ್ತಿನಲ್ಲಿ ಇಟ್ಟುಕೊಬೇಕು ಅಂತ...ಸೋ ಡೊಂಟ್ ವರ್ರಿ ಅಟ್ ಆಲ್ ..


ಗೀತಾ : ಹೆಂಗೆ....ಏನ್ ಮಾಡ್ತೀಯ...ಏನ್ ಮಾಡಿದ್ರು ಸ್ವಲ್ಪ ದಿನ ಅಷ್ಟೇ ...ಎರಡು ಮಕ್ಕಳು ಆದ್ಮೇಲೆ ಮುಗೀತು ..ನಿನ್ ಮನೇಲಿ ಇಪ್ಪತ್ತನಾಲ್ಕು ಗಂಟೆ ಕೆಲ್ಸ ಇದ್ದೆ ಇರುತ್ತೆ ...ಈಗ ಗೊತ್ತಾಗಿಲ್ಲ ನಿಂಗೆ ..ಮುಂದೆ ನೀನೇ ಹೇಳ್ತೀಯ...

ರಾಧಾ : ಆಯ್ತು ಬಿಡು ಈಗ... ನಡಿ ಹೋಗೋಣ..
ಗೀತಾ : ನಾನ್ ಅಂತೂ ನಮ್ ಅಮ್ಮ ಅಪ್ಪನ್ನ ಬೆಂಗಳೂರಿಗೆ ಕರ್ಕೊಂಡು ಹೋಗ್ತೀನಿ ಗೊತ್ತಾ ....


ಮುಂದುವರಿಯುವುದು.....