Saarike - 5 in Kannada Thriller by Shrathi J books and stories PDF | ಸಾರಿಕೆ - 5

Featured Books
  • उजाले की ओर –संस्मरण

    मनुष्य का स्वभाव है कि वह सोचता बहुत है। सोचना गलत नहीं है ल...

  • You Are My Choice - 40

    आकाश श्रेया के बेड के पास एक डेस्क पे बैठा। "यू शुड रेस्ट। ह...

  • True Love

    Hello everyone this is a short story so, please give me rati...

  • मुक्त - भाग 3

    --------मुक्त -----(3)        खुशक हवा का चलना शुरू था... आज...

  • Krick और Nakchadi - 1

    ये एक ऐसी प्रेम कहानी है जो साथ, समर्पण और त्याग की मसाल काय...

Categories
Share

ಸಾರಿಕೆ - 5

ನನ್ನ ಪ್ರೀತಿಯೇ


ನಾ ನಿನ್ನ ಮನಕ್ಕೆ ಹತ್ತಿರದವನು , ಹಿಂದೊಮ್ಮೆ ನಿನ್ನನೇ ಬಳ್ಳಿಯಂತೆ ಸುತ್ತಿಕೊಂಡಿದ್ದೆ . ಆದರೆ ನಾ ಮಾಡಿದ ನೀರ್ಲಕ್ಷದಿಂದ ಈ ದಿನ ನಿನ್ನಿಂದ ಇನ್ನು ಹತ್ತಿರವಾಗದಷ್ಟು ದೂರವಾಗಿದ್ದೆನೆ . ಅಂದು ನಿನ್ನ ಸಾವು ನಿಶ್ಚಯವಾಗಿರಲಿಲ್ಲ ಆದರು ನನ್ನ ಪ್ರೀತಿಯ ಅಮಲಿನಲ್ಲಿ ನೀ ಸಾವಿಗೆ ಮುತ್ತಿಕ್ಕಿದೆ . ಈಗ ನಿನಗೆ ಮತ್ತೊಂದು ವಿಷಯಕ್ಕೆ ಕೇಳಿಕೊಳ್ಳುತ್ತಿದ್ದೇನೆ , ಈ ಕೆಲಸ ಮಾಡಿ ಕೊಡುತ್ತಿಯ .....

ಅದು ಏನೆಂದರೆ ಕಾರ್ತಿಕ ವಂಶವನ್ನು ಯುದ್ಧದಲ್ಲಿ ಸೋಲಿಸುವುದು ತುಂಬಾ ಕಷ್ಟ ಎಂದು ತಿಳಿದು . ಶತ್ರುಗಳು ಮರೆಯಲ್ಲಿ ನಿಂತು ಪ್ರಹಾರ ಮಾಡಲು ಸಜ್ಜಾಗಿದ್ದರೆ . ಅವರ ಮೊದಲ ಗುರಿ ಸುರಭಿಯಾಗಿದ್ದಳು . ಅವರ ಗುರಿಯಂತೆ ಸುರಭಿಯನ್ನು ಕೊನೆಮಾಡಿದ್ದರೆ . ಆದರೆ ನಾನು ಅವರ ಉಪಯಾವನ್ನು ಅವರಿಗೆ ತಿರುಗು ಬಾಣ ಮಾಡಲು . ಸುರಭಿ ದೇಹಕ್ಕೆ ನಿನ್ನ ಆತ್ಮವನ್ನು ಸೇರಿಸಿದೆ. ಇಲ್ಲಿಗೆ ನನ್ನ ಕೆಲಸ ಮುಗಿದಿದೆ.

ಇಲ್ಲಿಂದ ನಿನ್ನ ಕೆಲಸ ಶುರುವಾಗುವುದು . ನಿನ್ನ ಅಂದರೆ ಸುರಭಿಯ ವಂಶಕ್ಕೆ ಶತ್ರು ಆಗಿರುವ ಆ ಮಧ್ಯಮ ವಂಶದವರನ್ನು ಕೊನೆಮಾಡಬೇಕು. ನಿನ್ನ ದೇಹದ ಒಡತಿಯಾದ ಸುರಭಿಯ ತಾತ , ಅಪ್ಪ , ದೊಡ್ಡಪ್ಪ ಈಗ ನಿನ್ನವರು . ಅವರನ್ನು ರಕ್ಷಿಸುವುದು ನಿನ್ನ ಜವಾಬ್ದಾರಿ . ಮಧ್ಯಮ ವಂಶವನ್ನು ಸರ್ವನಾಶ ಮಾಡಿಯಾದರು ನೀನು ಅವರನ್ನು ಉಳಿಸಬೇಕು. ನಾನು ಏನು ಹೇಳುತ್ತೀರುವೆ ಎಂದು ನಿನಗೆ ಅರ್ಥವಾಗಿದೆ ಎಂದು ತಿಳಿಯುತ್ತೇನೆ . ನೀನು ಕ್ಷೇಮವಾಗಿರು ಮತ್ತು ನಿನ್ನವರನ್ನು ಕ್ಷೇಮವಾಗಿರಿಸು .......


ನಿನ್ನ ಪ್ರೀತಿಯ ಅರ್ಜುನ





✨✨✨✨✨✨

ಮದ್ಯಮ ವಂಶದ ಚಕ್ರವರ್ತಿ ಸ್ಥೂಲಕರ್ಣನಿಗೆ ಗಂಡು ಮಗುವಿನ ತುಂಬಾ ಅಭಿಲಾಷೆ ಇತ್ತು . ಆದರೆ ಅವನ ಭಾಗ್ಯದಲ್ಲಿ ಗಂಡು ಮಗುವಿನ ತಂದೆಯಾಗುವ ಯೋಗವಿರಲ್ಲಿಲ್ಲ , ಹಲವು ಜಪ ತಪಗಳನ್ನು ಯಜ್ಞ ಯಾಗಾದಿಗಳನ್ನು ಮಾಡಿದರು ಅವನಿಗೆ ಯಾವುದೇ ಉಪಯೋಗವಾಗುವುದಿಲ್ಲ . ಅವನ
ಮಡದಿ ಕಲ್ಯಾಣಿ ದೇವಿಯು ಐದನೇ ಬಾರಿಯು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಇದರಿಂದ ಅವನಿಗೆ ಅವನ ವಂಶ ವೃಕ್ಷ ನನ್ನೊಂದಿಗೆ ಮುಕ್ತಾಯವಾಗಬಹುದು ಎಂದು ಭಯ ಕಾಡ ತೊಡಗಿತು . ಅವನ ಮಂತ್ರಿ ಕಿರಾತಾರ್ಜುನ ನೀಡಿದ ಉಪಾಯವನ್ನು ಸರಿಯೆಂದು ತಿಳಿದು , ಅವನು ಆ ಹೆಣ್ಣು ಮಗುವನ್ನು ಗಂಡು ಮಗು ಎಂದು ಇಡೀ ರಾಜ್ಯದಲ್ಲಿ ಡಂಗುರ ಸಾರುವ ಆದೇಶ ಹೊರಡಿಸಿದ .

ಆ ಮಗು ಹೆಣ್ಣು ಎಂದು ತಿಳಿದವರಲ್ಲಿ ತನ್ನ ಹೆಂಡತಿ ಕಲ್ಯಾಣಿ ದೇವಿ ಮತ್ತು ಕಿರಾತಾರ್ಜುನನನ್ನು ಬಿಟ್ಟು ಮತ್ತೆಲ್ಲರನ್ನು ಸಾಯಿಸುತ್ತನೆ . ತನ್ನ ಹೆಂಡತಿ ಎಲ್ಲಿ ತಪ್ಪಿ ಆ ಸತ್ಯವನ್ನು ಯಾರಿಗಾದರೂ ಹೇಳಬಹುದು ಎಂಬ ಭಯದಿಂದ ಅವಳ ನಾಲಿಗೆಯನ್ನು ತುಂಡು ಮಾಡುತ್ತನೆ . ನಂತರ ಆ ಮಗುವಿಗೆ ಉತ್ತಂಕ ಎಂದು ಹೆಸರಿಡುತ್ತಾರೆ , ಆ ಮಗುವನ್ನು ಒಂದು ಗೌಪ್ಯ ಸ್ಥಳದಲ್ಲಿ ಇರಿಸಿ ಶಿಕ್ಷಣ ನೀಡ ತೊಡಗುತ್ತಾನೆ . ಉತ್ತಂಕ ಆ ಎಲ್ಲ ವಿದ್ಯೆಗಳನ್ನು ಶ್ರದ್ದೆಯಿಂದ ಕಲಿಯುವನು , ಅವನ ಎಲ್ಲಾ ಶಿಕ್ಷಣ ಮುಗಿದ ನಂತರ ಎಲ್ಲಾರ ಮುಂದೆ ಅವನಿಗೆ ಪಟ್ಟಾಭಿಷೆಕ ಮಾಡುತ್ತಾನೆ .

ಅವನು ಪಟ್ಟಾಭಿಷೆಕದ ನಂತರ ತನ್ನ ತಂದೆಯ ಆಸೆಯಂತೆ ವಿಶ್ವ ವಿಜಯಕ್ಕೆ ಹೋಗುತ್ತಾನೆ . ಆದರೆ ಅವನ ವಿಶ್ವ ವಿಜಯಕ್ಕೆ ಕಪ್ಪು ಮನಿಯಂತೆ , ಆ ದ್ರಾವಿಡ್ ಸಾಮ್ರಾಜ್ಯದ ರಾಜ ಪಾರ್ಥ ಸೇನಾ ಅಡ್ಡ ಬರುತ್ತನೆ . ಅವರನ್ನು ಸೋಲಿಸಲಾಗದೆ , ಮತ್ತೆ ಹಿಂತಿರುಗಿ ಉತ್ತಂಕ ಅವನ ಸಾಮ್ರಾಜ್ಯಕ್ಕೆ ಬರುತ್ತಾನೆ . ತಂದೆ ಸ್ಥೂಲಕರ್ಣನ ಆದೇಶದ ಪ್ರಕಾರ ಅವನು ಶೃಂಗ ದೇಶದ ಯುವರಾಣಿ ಮನೋಹರಿಯೊಂದಿಗೆ ಮದುವೆಯಾಗುತ್ತಾನೆ , ಮನೋಹರಿ ಹೆಸರಿಗೆ ತಕ್ಕಂತೆ ಅವಳ ಸೌಂದರ್ಯ ರಾಶಿ ಕೂಡ ಮನೋಹರವಾಗಿತ್ತು . ಮತ್ತು ಅವಳು ತುಂಬಾ ಒಳ್ಳೆಯವಳು . ವಿಪರ್ಯಸವೆಂದರೆ ಮದುವೆಯಾದ ಮರುದಿವಸ ಅಥರ್ವ ದೇಶದ ಸರ್ಪರಾಜ ಯುದ್ಧಕ್ಕೆ ಎಂದು ಬರುತ್ತಾನೆ ನಂತರ ಉತ್ತಂಕ ಅವರನ್ನು ಸೋಲಿಸುತ್ತಾನೆ . ಅವನ ಮಗಳು ಮಾಯಾಧರಿ ಮದುವೆಯಾಗುತ್ತನೆ , ಮಾಯಾಧರಿ ಒಬ್ಬಳು ಅಮಾನುಷ ಶಕ್ತಿಗಳ ಒಡತಿಯಾಗಿದ್ದಳು .
ಅವಳು ಉತ್ತಂಕನನ್ನು ನೋಡಿ ಅವನನ್ನು ಪಡೆಯಲು ಮಂತ್ರ ಶಕ್ತಿಯ ಮೂಲಕ ಸಮ್ಮೋಹನೆ ಮಾಡುತ್ತಾಳೆ . ನಂತರ ಅವಳನ್ನು ಮದುವೆ ಮಾಡಿಕೊಳ್ಳುವಂತೆ ಮಾಡುತ್ತಾನೆ , ಉತ್ತಂಕನು ಹೆಣ್ಣು ಎಂಬುವು ಪತ್ನಿಯರಿಗೆ ಮೊದಲ ರಾತ್ರಿಯ ದಿನ ಹೇಳಿ ಇಬ್ಬರ ಬಳಿಯು ಕ್ಷಮೆ ಕೇಳುತ್ತಾಳೆ . ಇದನ್ನು ಕೇಳಿ ಕೋಪಗೊಂಡ ಎರಡನೆಯ ವಧು ತನ್ನ ತಂದೆ ಸರ್ಪರಾಜನಿಗೆ ತನ್ನ ಪತಿ ಪುರುಷನಲ್ಲವೆಂದು ಪತ್ರ ಬರೆಯುತ್ತಾಳೆ. ಸರ್ಪರಾಜ ದಂಡೆತ್ತಿ ಬರಲು ನಿರ್ಧಾರ ಮಾಡುತ್ತಾನೆ. ಇದಕ್ಕೆಲ್ಲ ನಾನೇ ಕಾರಣವೆಂದು ಮನನೊಂದ ಉತ್ತಂಕ ಪ್ರಾಣ ಬಿಡಲು ಅರಣ್ಯಕ್ಕೆ ಹೋಗುತ್ತಾಳೆ .

ಮನನೊಂದು ಇನ್ನೇನು ಸಾಯಲು ಹೋಗಬೇಕು ಅನ್ನುವಾಗ ಆಕಾಶದಲ್ಲಿ ವಿಹರಿಸುತ್ತಿದ್ದ ಅಂಗಾರ ಪರ್ಣ . ಇವನ ಬಗ್ಗೆ ಹೇಳುವುದಾದರೆ ಇವನೊಬ್ಬ ಯಕ್ಷ , ಕುಬೇರ ದೇವನ ವನವನ್ನು ಕಾಯುವ ಯಕ್ಷ . ಮತ್ತು ಇವನು ಮಾಯೆ ಮಾಡುವುದರಲ್ಲಿ ಬಳು ಚತುರ , ತನ್ನ ಕೆಲಸದಿಂದ ಬೇಸತ್ತು ರಜೆ ಹಾಕಿ ವಿಹಾರಕ್ಕೆ ಬಂದಾಗ ಉತ್ತಂಕನನ್ನು ಕಾಣುತ್ತಾನೆ .

ಅವಳ ಕಥೆಯನ್ನು ಕೇಳಿ ಅಯ್ಯೋ ಪಾಪವೆಂದು ಮರುಗಿ ಒಂದು ಉಪಾಯ ಮಾಡುತ್ತಾನೆ ತನ್ನ ಯಕ್ಷ ಮಾಯ ವಿದ್ಯೆಯಿಂದ ಒಂದು ತಿಂಗಳ ಕಾಲ ನಾನು ಹೆಣ್ಣಾಗುವೆ ನೀನು ನನ್ನ ಪುರುಷತ್ವ ತೆಗೆದುಕೊಂಡು ನಿನ್ನ ಪತ್ನಿಯರನ್ನು ಭೋಗಿಸಿ ಆನಂದಿಸು ಆ ಮೇಲೆ ಈ ಸ್ಥಳಕ್ಕೆ ಬಂದು ನನ್ನ ನೆನೆದು ಕರೆ ಬರುವೆ ನನ್ನ ಪುರುಷತ್ವವನ್ನು ಹಿಂಪಡೆವೆ ಅಂತ ಸಲಹೆ ನೀಡಿದ .

ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕೆಂದು ತಿಳಿದು ಉತ್ತಂಕ ಒಪ್ಪಿಗೆ ನೀಡಿತ್ತನೆ , ಮತ್ತು ಪತ್ನಿಯರನ್ನು ಸಂಭೋಗಿಸುತ್ತಾನೆ . ಮಾಯಾಧರಿ ತನ್ನ ತಂದೆಗೆ ಮತ್ತೊಂದು ಪತ್ರ ಬರೆದು

" ನನ್ನ ಪತಿ ಪುರುಷ , ಕ್ಷಮೆ ಇರಲಿ "

ಎಂದು ಹೇಳುತ್ತಾಳೆ .

ಸರ್ಪರಾಜ ಯುದ್ಧ ನಿಲ್ಲಿಸಿ ಅರ್ಧ ದಾರಿಯಲ್ಲಿ ಹಿಂತಿರುಗುತ್ತಾನೆ . ಉತ್ತಂಕ ತನ್ನ ಮಾತಿನಂತೆ ಒಂದು ತಿಂಗಳಾದ ಮೇಲೆ ಅದೇ ಸ್ಥಾನಕ್ಕೆ ಬಂದು ಅಂಗಾರ ಪರ್ಣನನ್ನು ಕರೆಯುತ್ತಾನೆ ಆಗ ಅಂಗಾರ ಪರ್ಣ ಕೋಪದಲ್ಲಿ ಪ್ರತ್ಯಕ್ಷ ಆಗುತ್ತಾನೆ .