ಚೂರು ಪಾರು

  • 7k
  • 3k

ಚೂರು ಪಾರು (ವಿಭಿನ್ನ ಪ್ರೇಮ ಕಥೆ) (ಲೇಖಕ ವಾಮನಾ ಚಾರ್ಯ) ಅಂದು ಪವನ್ ಪೂರ್ ನಗರದಲ್ಲಿ ಬೆಳಗಿನ ಆರು ಗಂಟೆಯಿಂದ ಸಾಯಂಕಾಲ ಆರು ಗಂಟೆ ವರೆಗೆ ಸೆಕ್ಷನ್ 144 ಕರ್ಫು ಜಾರಿ ಮಾಡಿದ್ದರು. ರಸ್ತೆಗಳ ಮೇಲೆ ವಾಹನ ಗಳು ಹಾಗೂ ಜನ ಸಂಚಾರ ಇಲ್ಲದೇ ಸ್ತಬ್ದ ವಾಗಿತ್ತು. ಬೆಳಗ್ಗೆ ಸುಮಾರು ಹತ್ತು ಗಂಟೆಗೆ ಸಮಯಕ್ಕೆ ಮಹಾತ್ಮಾ ಗಾಂಧಿ ಮುಖ್ಯ ರಸ್ತೆ ಮೇಲೆ ಚಡ್ಡಿ ಹಾಗೂ ಬನಿಯನ್ ಧರಿಸಿದ ಧ್ರುಢ ಕಾಯ ನಾದ ಒಬ್ಬ ಯುವಕ ಹಾಗೂ ಜೊತೆಗೆ ಅವನ ನಾಲ್ಕು ಮಿತ್ರರು ಮಾತಾಡುತ್ತಾ ರಸ್ತೆಯ ಮೇಲೆ ಹೋಗುತ್ತಿರು ವದನ್ನು ನೋಡಿದ ಕರ್ತವ್ಯ ನಿರತನಾದ ಪೊಲೀಸ್ ಅಧಿಕಾರಿ ಗುಣಶೇಖರ್ ಅವರನ್ನು ನಿಲ್ಲಿಸಿದ. ಆಗ ಚಡ್ಡಿ ಯುವಕ ಗಾಬರಿ ಆಗಿ,“ಸರ್, ನನ್ನ ತಾಯಿಗೆ ವಿಪರೀತ ಜ್ವರ. ಡಾಕ್ಟರ್ ಬರೆದುಕೊಟ್ಟ ಮಾತ್ರೆಗಳನ್ನು ತರಲು ನಾವೆಲ್ಲರೂ ಎದುರಿಗೆ ಇರುವ ‘ಪ್ರಶಾಂತ್ ಮೆಡಿಕಲ್ ಸ್ಟೋರ್ ನಲ್ಲಿ ತೆಗೆದುಕೊಂಡು ವಾಪಸ್ ಹೋಗುತ್ತಾ ಇದ್ದೇವೆ. ನೋಡಿ ಸರ್ ಈ ಮಾತ್ರೆ ಗಳು,”