ನುಡಿದಂತೆ ನಡೆದ ಡಾಕ್ಟರ್(ಚಿಕ್ಕ ಕತೆ - ಲೇಖಕ ವಾಮನ ಆಚಾರ್ಯ) ಪುಟ್ಟ ಗ್ರಾಮ ರಾಮಾಪುರದಲ್ಲಿ ಬೆಳಗಿನ ಎಂಟು ಗಂಟೆ ಸಮಯ ಮೋಡ ಕವಿದ ವಾತಾವರಣ. ಚಳಿಗಾಲದ ಕೊರೆಯುವ ಚಳಿ ಯಿಂದ ಜನರ ಸಂಚಾರ ಬಹಳ ಕಡಿಮೆ. ಅನಿರುದ್ಧ ಆಸ್ಪತ್ರೆ ಮುಂದೆ ಜನರ ಒಂದು ಗುಂಪು ಆರೋಗ್ಯ ತಪಾಸಣೆ ಗಾಗಿ ಬಂದರು. ಆಸ್ಪತ್ರೆ ಬಾಗಿಲು ಮುಚ್ಚಿರುವ ದರಿಂದ ಹೊರಗೆ ನಿಂತರು. ಡಾಕ್ಟರ್ ಗೆ ಜನರು ಪ್ರೀತಿಯಿಂದ ಆನಿ ಎಂದು ಕರೆಯುತ್ತಿದ್ದರು. “ಡಾಕ್ಟರ್ ಆನಿ ಯಾವಾಗಪ್ಪ ಬರೋದು? ಈಗ ಕ್ಯೂ ಮಾಡುವದು ಆಗುವದಿಲ್ಲ. ಡಾಕ್ಟರ್ ಗೆ ಮೊದಲು ತೋರಿಸುವ ವನು ಯಾರು?” ಎಂದ ಗುಡಿಸಲು ಹೋಟೆಲ್ ಮಾಲೀಕ ಮಣಿಕಂಠ. “ಹೌದು, ಎಲ್ಲರಿಗೂ ಅವಸರ. ನನ್ನದೊಂದು ಸಲಹೆ. ವಯಸ್ಸಾದ ವರು, ಸಿರಿಯಸ್ ಪೇಶಂಟ್ ಹಾಗೂ ಚಿಕ್ಕ ಮಕ್ಕಳು ಮೊದಲು ತೋರಿಸಲಿ. ನಾನು ಕೊನೆಗೆ ತೋರಿಸುವೆ. ಇದರಂತೆ ಸರಿಯಾಗಿ ನಾನು ಲಿಸ್ಟ್ ಮಾಡುವೆ,”ಎಂದ ಹೈಸ್ಕೂಲ್ ಅಭ್ಯಾಸ ಅರ್ಧಕ್ಕೆ ನಿಲ್ಲಿಸಿದ ಯುವಕ ಹಾಗೂ ಸಮಾಜ ಸೇವಕ ಗಂಗಾಧರ ಶಾನುಭೋಗ.“ನೀನು