ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ

  • 6.5k
  • 1
  • 2.2k

ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ (ಚಿಕ್ಕ ಕಥೆ ಲೇಖಕ- ವಾಮನಾಚಾರ್ಯ) ಬೆಳಗಿನ ಒಂಭತ್ತು ಗಂಟೆ ಸಮಯ. ಟ್ರಿನ್ ಟ್ರಿನ್ ಎಂದು ಕಾಲಿಂಗ್ ಬೆಲ್ ಶಬ್ದ.“ಈಗ ಯಾರಪ್ಪ ಬೆಲ್ ಮಾಡುವರು?” ಎಂದು ಮೀರಾ ತನ್ನ ಪತಿ ಹರ್ಷ ನಿಗೆ ಕೇಳಿದಳು.“ಸ್ವಲ್ಪ ಇರು,” ಎಂದು ಹೇಳಿ ಬಾಗಿಲು ತೆಗೆದ.ಅವರ ಮನೆಗೆ ಆಕಸ್ಮಿಕವಾಗಿ ರಾಘವಪುರ್ ನಗರದ ಪ್ರತಿಷ್ಟಿತ ವ್ಯಕ್ತಿಗಳ ಆಗಮನ ವಾಯಿತು. ಅರ್ಧ ಗಂಟೆ ಇದ್ದು ಅವರು ಹೊರಟರು. ಮೀರಾಗೆ ಕೋಪ ಬಂದು, "ಇದೇನ್ರೀ, ಅವರಿಗೆ ಹೊತ್ತು ಗೊತ್ತು ಎನ್ನುವ ಪರಿಜ್ಞಾನ ಇಲ್ಲವೇ? ಇನ್ನೂ ಅರ್ಧ ಗಂಟೆಯಲ್ಲಿ ಊಟ ಮುಗಿಸಿ ನೀವು ಕೋರ್ಟ್ ಗೆ ನಿಮ್ಮ ಸಹಾಯಕಿ ಆದ ನಾನು ನಿಮಗೆ ಸಂಭಂದ ಪಟ್ಟ ಫೈಲ್ ಕೊಡುವದಲ್ದೇ ಬ್ರಿಫಿ0ಗ್ ಮಾಡಬೇಕು. ಇಂದು ಒಂದು ಮಹತ್ವ ವಾದ ಕೇಸ್ ಹಿಯರಿಂಗ್ ಇದೆ. ನಿಮ್ಮ ಮುಖ ನೋಡಿ ಪಾಪ ಅನಿಸಿ ನನಗೆ ಆಗಿರುವ ಸಿಟ್ಟು ತಡೆದುಕೊಂಡೆ.”“ಇವರೆಲ್ಲ ಏಕೆ ಬಂದರು ಎನ್ನುವದು ನಿನಗೆ ಅರ್ಥ ವಾಗಿರ ಬಹುದು. ನಾನು