ಆಚಾರ ವಿಲ್ಲದ ನಾಲಿಗೆ (ನೀತಿ ಕಥೆ - ವಾಮನಾಚಾರ್ಯ)ರಾಘವಪುರ್ ಪುರಸಭೆ ಪಕ್ಕದಲ್ಲಿ ಇರುವದು ದೊಡ್ಡ ಆಲದ ಮರ. ಅದರ ಕೆಳಗೆ ಇರುವದು ವಿಶಾಲವಾದ ಕಟ್ಟೆ. ಅದಕ್ಕೆ ಹರಟೆ ಕಟ್ಟೆ ಎನ್ನುವರು. ಅಂದು ಭಾನುವಾರ ಬೆಳಗ್ಗೆ ಎಂಟು ಗಂಟೆಗೆ ತಾಲೂಕು ಕಛೇರಿಯ ಮೂವರು ಸಿಬ್ಬಂದಿಗಳು ಹರಟೆ ಕಟ್ಟೆಗೆ ಒಬ್ಬೊಬ್ಬರಾಗಿ ಬಂದರು.“ಮಯೂರಿ ಹಾಗೂ ಪ್ರಜ್ವಲ್ ಕೇವಲ ಒಂದು ತಿಂಗಳು ಹಿಂದೆ ತಾಲೂಕು ಕಛೇರಿಯಲ್ಲಿ ಕೆಲಸಕ್ಕೆ ಸೇರಿದವರು ಈಗ ಪ್ರೇಮಿಗಳು ಆಗಿ ಗುಪ್ತವಾಗಿ ಮದುವೆ ಕೂಡ ಆದರು.” ಎಂದು ಹರಟೆ ಪ್ರಾರಂಭ ಮಾಡಿದ ನಾರಾಯಣ, ವಿಲೇಜ್ ಅಕೌಂಟ0ಟ್.“ಹೌದು! ಇದು ‘ವಿಚಿತ್ರ ಆದರೂ ಸತ್ಯ. ಇನ್ನೊಬ್ಬರ ವೈಯಕ್ತಿಕ ವ್ಯವಹಾರದ ಬಗ್ಗೆ ಮಾತಾಡಿದರೆ ಹರಟೆಗೆ ಮೆರುಗು ಬರುವದು,”ಎಂದ ದ್ವಿತೀಯ ದರ್ಜೆ ಗುಮಾಸ್ತ ಶಂಭುನಾಥ.“ನಾವು ಇನ್ನೊಬ್ಬರ ಬಗ್ಗೆ ಮಾತಾಡುವದು ಒಂದು ತರಹದ ಮೋಜು. ಮಯೂರಿ ಹಾಗೂ ಪ್ರಜ್ವಲ್ ಬೇರೆ ಬೇರೆ ಊರಿನಿಂದ ಬಂದವರು, ಬೇರೆ ಬೇರೆ ಜಾತಿಯವರು ಅಲ್ಲದೇ ಇಬ್ಬರ ಸಂಸ್ಕೃತಿ ವಿಭಿನ್ನ. ಮಯೂರಿ ಕಪ್ಪು ಹಾಗೂ ದಪ್ಪ ಇದ್ದು