ದಂಪತಿ ಅಂದರೆ ಹೀಗಿರಬೇಕು

  • 19.3k
  • 1
  • 6.9k

ದಂಪತಿ ಅಂದರೆ ಹೀಗಿರಬೇಕು (ಹಿರಿಯ ದಂಪತಿ- ಸ್ವಾರಸ್ಯ ಕಥೆ) ಲೇಖಕ ವಾಮನಾಚಾರ್ಯಅದೇ ವರ್ಷ ಸೇವೆಯಿಂದ ನಿವೃತ್ತ ರಾದ ದಂಪತಿ ಘನಶ್ಯಾಮ್ ಹಾಗೂ ಶ್ಯಾಮಲಾ, ಸುರ್ಯಾ ಹೌಸಿಂಗ್ ಬೋರ್ಡ್ ಕಾಲನಿ, ರಾಘವಪುರ ನಗರ ದಲ್ಲಿ ಇರುವ ತಮ್ಮ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಸಮಯ ಮಧ್ಯಾಹ್ನ ಹನ್ನೆರಡು ಗಂಟೆ. ಡೋರ್ ಬೆಲ್ ರಿಂಗ್ ಆಗುತ್ತಾ ಇರುವದನ್ನು ಗಮನಿಸಿದ ಶ್ಯಾಮಲಾ ಯಾರು ಎಂದು ಕಿಟಕಿಯಿಂದ ಕೇಳಿದಳು. ಕೊರಿಯರ್ ಬಾಯ್ ಕಿಟಕಿಯಿಂದಲೇ ಕವರ್ ಕೊಟ್ಟ. "ಶ್ಯಾಮ್ ಎಲ್ಲಿದ್ದಿರಿ? ನಿಮಗೆ ಕೊರಿಯರ್ ಬಂದಿದೆ." ಅವರು ಮನೆಯ ಹಿಂದೆ ಹಿತ್ತಲು ಅಲ್ಲಿ ಇರುವ ಬಾಲ್ಕನಿಯಲ್ಲಿ ಯೂಟ್ಯೂಬ್ ನಲ್ಲಿ ಚಲನ ಚಿತ್ರ ಹಾಡನ್ನು ಕೇಳುತ್ತಾ ಡಾನ್ಸ್ ಮಾಡುತ್ತ ಇರುವಾಗ ಪತ್ನಿಯ ಕರೆ ಬಂದ ಕೂಡಲೇ ಓಡುತ್ತ ಬಂದು ಕವರ್ ತೆಗೆದು ಕೊಂಡರು."ಪತಿ ಮಹಾಶಯರೇ, ಇದೇನು ನಿಮ್ಮ ಅವತಾರ? ಈ ವಯಸ್ಸಿನಲ್ಲಿ ಯುವಕರ ಹಾಗೆ ಚಡ್ಡಿ, ಡಿಜೈನರ್ ಟೀ ಶರ್ಟ್ ,ಅದರ ಮೇಲೆ ಐ ಲವ್ ಯು ಬರವಣಿಗೆ, ತಲೆಯಲ್ಲಿ ಹುಡುಕಿದರೂ ಒಂದೂ