ಚಿಂತೆ ಬೇಡ ಚಿಂತನೆ ಇರಲಿ (ಕಿರು ಕಥೆ- ವಾಮನಾಚಾರ್ಯ)ಅದೇ ವರ್ಷ ನಿವೃತ್ತ ರಾದ ಮಹೇಶ್ ಹಾಗೂ ಅವರ ಪತ್ನಿ ಶ್ಯಾಮಲಾ ಮನೆಯಲ್ಲಿ ಇದ್ದರು. ಪವನಪೂರದಲ್ಲಿ ಸಮಯ ಹನ್ನೆರಡು ಗಂಟೆಗೆ ಮೂವತ್ತು ನಿಮಿಷ. ಮೊಬೈಲ್ ಫೋನ್ ರಿಂಗ್ ಆಗುತ್ತ ಇರುವದನ್ನು ನೋಡಿದ ಶ್ಯಾಮಲಾ, ಕೊರಿಯರ್ ಎಂದು ಗೊತ್ತಾಗಿ ಬಾಗಿಲು ತೆಗೆದು ಕವರ್ ತೆಗೆದುಕೊಂಡಳು. ಬಾಗಿಲು ಹಾಕಿ ಪತಿಯನ್ನು ಕರೆದಳು."ಮಹೇಶ್, ಎಲ್ಲಿದ್ದಿರಿ? ನಿಮಗೆ ಕೊರಿಯರ್ ಬಂದಿದೆ." ಮಹೇಶ್ ಮನೆಯ ಹಿಂದೆ ಇರುವ ಬಾಲ್ಕನಿಯಲ್ಲಿ ಪೇಪರ್ ಓದುತ್ತ ಮೊಬೈಲ್ ನಲ್ಲಿ ಚಲನ ಚಿತ್ರ ಹಾಡನ್ನು ಕೇಳುತ್ತಾ ಇದ್ದರು. ಪತ್ನಿಯ ಕರೆ ಬಂದ ಕೂಡಲೇ ಓಡುತ್ತ ಬಂದು ಕವರ್ ತೆಗೆದು ಕೊಂಡರು. ಉತ್ಸುಕತೆಯಿಂದ ಕವರ್ ನಲ್ಲಿ ಇರುವದನ್ನು ನೋಡಿದ ಮೇಲೆ ಅವರ ಮುಖದಲ್ಲಿ ಕಾಣುವ ಮಂದಹಾಸ ಗಮನಿಸಿದ ಶ್ಯಾಮಲಾ,"ಏನ್ರೀ, ಸಂತಸದ ವಿಷಯವೇ? ನಿಮ್ಮ ಸಂತಸದಲ್ಲಿ ನಾನು ಭಾಗಿ ಆಗಬಹುದೇ? ಎಂದಳುಆಕೆ ಎದುರಿಗೆ ನಿಂತಾಗ ಅದೇ ತಾನೆ ಕೇಳಿದ ಚಲನ ಚಿತ್ರದ ಸಂಗೀತ 'ನೀ ಬಂದು ನಿಂತಾಗ ನಿಂತು